ನನ್ನ ಹತ್ಯೆಗೆ ಸಿಪಿಎಂ ಸಂಚು - ಮಮತಾ ಆರೋಪ

7

ನನ್ನ ಹತ್ಯೆಗೆ ಸಿಪಿಎಂ ಸಂಚು - ಮಮತಾ ಆರೋಪ

Published:
Updated:

ವಾಷಿಂಗ್ಟನ್/ಕೊಲ್ಕತ್ತ (ಪಿಟಿಐ): `ಮಾವೊವಾದಿಗಳೊಂದಿಗೆ ಸೇರಿಕೊಂಡು ಸಿಪಿಎಂ ನನ್ನನ್ನು ಮುಗಿಸಲು ಸಂಚು ರೂಪಿಸಿದೆ. ಪಾಕಿಸ್ತಾನದ ಐಎಸ್‌ಐ, ಉತ್ತರ ಕೊರಿಯ, ವೆನಿಜುವೆಲಾ ಹಾಗೂ ಹಂಗರಿ ದೇಶಗಳು ಈ ಸಂಚಿಗೆ ಹಣಕಾಸು ನೆರವು ನೀಡುತ್ತಿವೆ~ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.`ಅವರು ನನಗೆ ಮರಣದಂಡನೆ ಸಂದೇಶ ನೀಡಿದ್ದಾರೆ, ಫೇಸ್‌ಬುಕ್, ಅಂತರ್ಜಾಲದಲ್ಲಿ ನಿತ್ಯವೂ ಈ ಸಂದೇಶವನ್ನು ಯಾರದೋ ಹೆಸರಿನಲ್ಲಿ ಹರಿಯಬಿಡಲಾಗುತ್ತಿದೆ~ ಎಂದು ಮಮತಾ `ವಾಷಿಂಗ್ಟನ್ ಪೋಸ್ಟ್~ ಜತೆಗಿನ ಸಂದರ್ಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇರುವ ತಮ್ಮ ವಿರೋಧವನ್ನು ಪುನರುಚ್ಚರಿಸಿದ ಮಮತಾ `ಸಾಯಲು ನಾನು ಸಿದ್ಧ, ಆದರೆ ಜನತೆಗೆ ಮೋಸ ಮಾಡಲಾರೆ~ ಎಂದು ಭಾವುಕರಾಗಿ ನುಡಿದಿದ್ದಾರೆ.ಮಮತಾ ಆರೋಪಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಇದನ್ನು `ಹಾಸ್ಯಾಸ್ಪದ~ ಹೇಳಿಕೆ ಎಂದಿದೆ.

ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇವೆ ಎಂದು ಪಕ್ಷದ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಹೇಳಿದರು.ಈ ನಡುವೆ ಮಮತಾ ಹೇಳಿಕೆ ಬೆಂಬಲಿಸಿರುವ ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ಫರಹದ್ ಹಕೀಮ್, `ಮಾವೊಗಳು ಹಾಗೂ ಸಿಪಿಎಂ ಮಮತಾ ಜೀವ ಬಲಿ ತೆಗೆದುಕೊಳ್ಳಲು ಹವಣಿಸಿವೆ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry