ನಬಾರ್ಡ್‌ನ ಜಂಟಿ ಬಾಧ್ಯತಾ ಗುಂಪು ರಚನೆ

7

ನಬಾರ್ಡ್‌ನ ಜಂಟಿ ಬಾಧ್ಯತಾ ಗುಂಪು ರಚನೆ

Published:
Updated:

ಧಾರವಾಡ: ಇಲ್ಲಿಯ ಕೆಸಿಸಿ ಬ್ಯಾಂಕ್‌ನ ಸಹಕಾರ ಭವನದಲ್ಲಿ ಕೆಸಿಸಿ ಬ್ಯಾಂಕ್ ಹಾಗೂ ನಿಸರ್ಗ ರಾಷ್ಟ್ರೀಯ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಜಂಟಿ ಬಾಧ್ಯತಾ ಗುಂಪಿನ ರಚನೆ ಹಾಗೂ ಆದಾಯೋತ್ಪನ್ನ ಕಾರ್ಯ ಚಟುವಟಿಕೆಗಳ ತರಬೇತಿಯ ಕಾರ್ಯಕ್ರಮವು ಈಚೆಗೆ ನಡೆಯಿತು.ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ಎಚ್.ಗೋಲಂದಾಜ ಕಾರ್ಯಕ್ರಮ ಉದ್ಘಾಟಿಸಿದರು. ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಅಧ್ಯಕ್ಷತೆ ವಹಿಸಿ, ಶಿಬಿರಾರ್ಥಿಗಳಿಗೆ ಉದ್ಯೋಗ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳ ಬಗ್ಗೆ ವಿವರಿಸಿದರು.ನಿಸರ್ಗ ಸಂಸ್ಥೆ ಕಾರ್ಯದರ್ಶಿ ಮಂಜುನಾಥ ವಾಸಂಬಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ಕೆಸಿಸಿ ಬ್ಯಾಂಕ್ ಜೆಎಲ್‌ಸಿ, ಎಸ್‌ಎಚ್‌ಜಿ ನೋಡಲ್ ಅಧಿಕಾರಿ ಸಿ.ವಿ.ನಾಯಕ ಮತ್ತು ನಿಸರ್ಗ ಸಂಸ್ಥೆ ಸಮನ್ವಯಾಧಿಕಾರಿ ದಿವ್ಯಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.ಬ್ಯಾಂಕ್‌ನ ಸಿ.ಎಂ.ಭಾವಿಕಟ್ಟಿ, ಕೆ.ಎಸ್.ಕಡಕೋಳ ಹಾಗೂ ನಿಸರ್ಗ ಸಂಸ್ಥೆಯ ಸುನೀಲ ಪರಬತ್, ವಿಲಾಸ ಮೇತ್ರಿ, ಮಂಜುಳಾ ಜಮಾದಾರಖಾನೆ ಹಾಗೂ ಸಾವಿತ್ರಿ ಹುಲಿ ಇದ್ದರು. ಪ್ರಕಾಶ ಪತ್ತಾರ ಸ್ವಾಗತಿಸಿದರು. ಆರ್.ಡಿ.ಉಪ್ಪಿನ ನಿರೂಪಿಸಿದರು. ಪೂರ್ಣಿಮಾ ಹುಲಕುಂದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry