ನಭಕ್ಕೆ ಚಿಮ್ಮಿದ ರಷ್ಯಾ ನೌಕೆ

7

ನಭಕ್ಕೆ ಚಿಮ್ಮಿದ ರಷ್ಯಾ ನೌಕೆ

Published:
Updated:
ನಭಕ್ಕೆ ಚಿಮ್ಮಿದ ರಷ್ಯಾ ನೌಕೆ

ಮಾಸ್ಕೊ (ಐಎಎನ್‌ಎಸ್):  ಮೂವರು ಗಗನಯಾತ್ರಿಗಳನ್ನು  ಹೊತ್ತ ರಷ್ಯಾದ ವ್ಯೋಮನೌಕೆ ಸೋಮವಾರ ಮಧ್ಯರಾತ್ರಿ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತನ್ನ ಯಾನ ಆರಂಭಿಸಿತು.

ರಾಕೆಟ್ ವಾಹಕ ‘ಸೊಯುಜ್- ಎಫ್‌ಜಿ’ ಮೇಲೆ ಇರಿಸಲಾಗಿದ್ದ ‘ಸೊಯುಜ್ ಟಿಎಂಎ -21’ ವ್ಯೋಮನೌಕೆ ಕಜಕಿಸ್ತಾನದ ಬೈಕೊನುರ್‌ನಿಂದ ರಾತ್ರಿ 2.18ಕ್ಕೆ ನಭಕ್ಕೆ ಚಿಮ್ಮಿತು.

ವ್ಯೋಮನೌಕೆಯಲ್ಲಿರುವ ರಷ್ಯಾದ ಗಗನಯಾತ್ರಿಗಳಾದ ಅಲೆಕ್ಸಾಂಡರ್ ಸಮೊಕುತ್‌ಯೇವ್, ಆಂಡ್ರಿ ಬೊರಿಸೆಂಕೊ ಮತ್ತು ಅಮೆರಿಕದ ರೊನಾಲ್ಡ್ ಗಾರ್ನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 170 ದಿನ ಇರಲಿದ್ದಾರೆ. ಈ ಅವಧಿಯಲ್ಲಿ ಅಮೆರಿಕದ ಎರಡು ಬಾಹ್ಯಾಕಾಶ ನೌಕೆಗಳು, ರಷ್ಯಾದ ಮೂರು ನೌಕೆಗಳನ್ನು ಐಎಸ್‌ಎಸ್‌ಗೆ ಬರ ಮಾಡಿಕೊಳ್ಳಲಿರುವ ಗಗನಯಾತ್ರಿಗಳು 40ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಲಿದ್ದಾರೆ. ಇದೇ ವೇಳೆ ಅವರು ಬಾಹ್ಯಾಕಾಶ ನಡಿಗೆಯನ್ನೂ ಮಾಡಲಿದ್ದಾರೆ.ಯೂರಿ ಗಗಾರಿನ್ ಅವರು ಮೊತ್ತಮೊದಲ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡ ಸುವರ್ಣೋತ್ಸವದ ನೆನಪಿನಲ್ಲಿ ರಷ್ಯಾ ಈ ವ್ಯೋಮನೌಕೆಯ ಯಾನ ಕೈಗೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry