ಶನಿವಾರ, ಮೇ 15, 2021
22 °C

`ನಮಗೆ ದಯಾಮರಣ ಕೊಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಮೀನು ಕಸಿದುಕೊಳ್ಳಲು ನಿರಂತರ ಯತ್ನಿಸುತ್ತಿರುವುದರಿಂದ ಬೇಸತ್ತಿರುವ ಕುಟುಂಬವೊಂದು ದಯಾಮರಣ ಕೋರಿ ಇಲ್ಲಿಯ ಜಿಲ್ಲಾಡಳಿತದ ಮೊರೆ ಹೋಗಿದೆ.ಜಮೀನಿನ ವಿಚಾರವಾಗಿ ಸಾಕಷ್ಟು ತೊಂದರೆ ಅನುಭವಿಸಿ ನೊಂದಿರುವ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ದೇವರಹಳ್ಳಿಯ ಗ್ರಾಮದ ನಿವಾಸಿ, 80ರ ಇಳಿ ವಯಸ್ಸಿನ ಮಾಯಮ್ಮ, ಈಕೆಯ ಪುತ್ರಿಯರಾದ ಸಾವಿತ್ರಿ ಮತ್ತು ಜಯಮ್ಮ ದಯಾಮರಣ ಕೋರಿ ಮಂಗಳವಾರ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಮನುಗನಹಳ್ಳಿ ಸರ್ವೆ ನಂ. 13/1ರಲ್ಲಿ 30 ಗುಂಟೆ ಜಮೀನನ್ನು ಮಾಯಮ್ಮ ಹೊಂದಿದ್ದಾರೆ. ಪತಿ ಕಳೆದುಕೊಂಡು ಕುಟುಂಬ ನಿರ್ವಹಣೆ ಜವಾಬ್ದಾರಿಯನ್ನು ಮಾಯಮ್ಮ ಹೊತ್ತಿದ್ದಾರೆ. ಇದೇ ಗ್ರಾಮದ ರಾಜೇಗೌಡ ಹಾಗೂ ಆನಂದೇಗೌಡ ತಾವು ಮಾಯಮ್ಮ ಅವರ ಖಾಸ ಮಕ್ಕಳೆಂದು ಹೇಳಿಕೊಂಡು ಸುಳ್ಳು ದಾಖಲೆಯನ್ನು ಸೃಷ್ಟಿಸಿ ಮಾಯಮ್ಮ ಅವರಿಗೆ ಸೇರಿದ 30 ಗುಂಟೆ ಜಮೀನನ್ನು ತಮ್ಮ ಹೆಸರಿಗೆ ಅಕ್ರಮ ವಾಗಿ ಖಾತೆ ಮಾಡಿಸಿಕೊಂಡಿದ್ದರು.ರಾಜೇಗೌಡ ಹಾಗೂ ಆನಂದೇ ಗೌಡ ಅವರ ವಿರುದ್ಧ ಮಾಯಮ್ಮ, ಪುತ್ರಿ ಸಾವಿತ್ರಿ ಹುಣಸೂರಿನ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿ, ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಮಾಯಮ್ಮ ಕುಟುಂಬದ ಪರವಾಗಿ ತೀರ್ಪು ನೀಡಿತ್ತು.ಜಮೀನಿಗೆ ಸಂಬಂಧಿಸಿದಂತೆ ರಾಜೇಗೌಡ ಹಾಗೂ ಆನಂದೇಗೌಡ ಅಕ್ರಮವಾಗಿ ಮಾಡಿಸಿ ಕೊಂಡಿರುವ ಖಾತೆಯನ್ನು ರದ್ದುಗೊಳಿ ಸುವಂತೆ ನ್ಯಾಯಾಲಯ ಆದೇಶ ಸಹ ನೀಡಿತ್ತು.

ಆದರೂ ಸಂಬಂಧಪಟ್ಟ ಅಧಿಕಾರಿಗಳು ತಮಗೆ ನ್ಯಾಯ ಒದಗಿಸಿಕೊಟ್ಟಿಲ್ಲ ಎಂಬುದು ವೃದ್ಧೆ ಮಾಯಮ್ಮ ಹಾಗೂ ಇಬ್ಬರು ಪುತ್ರಿಯರ ಅಳಲು.ಜಮೀನಿನ ಪ್ರವೇಶಕ್ಕೆ ಅಡ್ಡಿ: `ತಮ್ಮ ಪರ ನ್ಯಾಯ ದೊರೆತ ಹಿನ್ನೆಲೆಯಲ್ಲಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನಾನು ಮತ್ತು ಮತ್ತು ಹೆಣ್ಣುಮಕ್ಕಳು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾಜೇಗೌಡ, ಆನಂದೇಗೌಡ ಹಾಗೂ ಬೆಂಬಲಿಗರು ತಡೆದರು. ನಮ್ಮ ಮೇಲೆ ತೀವ್ರ ಹಲ್ಲೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಬಿಳಿಕೆರೆ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನ ವಾಗಿಲ್ಲ' ಎಂದು ಮಾಯಮ್ಮ ಅಳಲು ತೋಡಿಕೊಂಡರು.ಜಮೀನಿನ ವಿಚಾರವಾಗಿ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ದೊರೆತರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಮೀನು ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂದು ಮಾಯಮ್ಮ ಮತ್ತು ಅವರ ಪುತ್ರಿಯರು ಜಿಲ್ಲಾಡಳಿತ ಮೊರೆ ಹೋಗಿದ್ದಾರೆ. ಒಂದು ವೇಳೆ ಜಿಲ್ಲಾಡಳಿತದದಿಂದ ಸೂಕ್ತ ನ್ಯಾಯ ಸಿಗದಿದ್ದರೆ ದಯಾಮರಣಕ್ಕೆ ಅವಕಾಶ ಕೋರಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.