ಬುಧವಾರ, ಜೂನ್ 16, 2021
23 °C

ನಮೋಶಿ ಹಠಾವೋ ನಮ್ಮ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಿರಿಯರ ಆಶೀರ್ವಾದ ಹಾಗೂ ಬೆಂಬಲದೊಂದಿಗೆ ಈ ಬಾರಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಸಂಸ್ಥೆಯ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ. ಸೂರ್ಯಕಾಂತ ಪಾಟೀಲ ತಿಳಿಸಿದರು.ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾರದರ್ಶಕ ಆಡಳಿತ ನೀಡುವ ಮೂಲಕ ಸಿಬ್ಬಂದಿ ಕಲ್ಯಾಣ ಮತ್ತು ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದ ಅವರು, ನಮೋಶಿ ವಿರುದ್ಧ ಆರೋಪ ಮಾಡಿದ್ದರ ಬಗ್ಗೆ ಸಂಸ್ಥೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಮೇಲಾಗಿ ಈ ಕುರಿತು ತಪ್ಪೊಪ್ಪಿಗೆ ಕೂಡ ಕೇಳಿಲ್ಲ ಎಂದು ಉತ್ತರಿಸಿದರು. ಸುಮಾರು 55 ಕೋಟಿ ರೂಪಾಯಿ ಖರ್ಚು ಮಾಡಿ ಸಂಸ್ಥೆಯನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ನಮೋಶಿ ಅವರಿಗೆ ನಾವೇ `ಈ ಹಣ ಎಲ್ಲಿಂದ ಬಂದಿತು?~ ಎಂದು ಕೇಳುತ್ತಿದ್ದೇವೆ. ಹೊಸ ಸಂಸ್ಥೆ ತೆಗೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಾಗ ಮಾತ್ರ ಅಭಿವೃದ್ಧಿ ಎನ್ನಬೇಕು. ಆದರೆ ಇದ್ದುದಕ್ಕೆ ಸುಣ್ಣ, ಬಣ್ಣ ಬಳಿದು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರೆ ಹೇಗೆ ಎಂದು ನಮೋಶಿಗೆ ತಿರುಗೇಟು ನೀಡಿದರು.ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಕ್ರಮ ನೇಮಕಾತಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರೂ ಬಹುಮತದ ಮೇರೆಗೆ ಅವೆಲ್ಲವುಗಳಿಗೆ ಅನುಮತಿ ತೆಗೆದುಕೊಂಡು ಸಂಸ್ಥೆಯ ಅಧಃಪತನಕ್ಕೆ ನಮೋಶಿಯವರೇ ನೇರ ಕಾರಣರು ಎಂದು ಆರೋಪಿಸಿದರು.ಒಂದುವೇಳೆ ನಾವು ಅಧಿಕಾರಕ್ಕೆ ಬಂದರೆ ಮೇಲಿನ ಈ ಎಲ್ಲವುಗಳಿಗೆ ವಿಚಾರಣೆ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಮೋಶಿಯವರನ್ನು ತೆಗೆದು ಹಾಕುವುದಕ್ಕಾಗಿಯೇ ಡಾ. ಬಸವರಾಜ ಜವಳಿ ಮತ್ತು ಬಸವರಾಜ ಭೀಮಳ್ಳಿ ಮತ್ತು ನಾವೆಲ್ಲರೂ ಒಂದಾಗಿ ಸ್ಪರ್ಧಿಸುತ್ತಿದ್ದೇವೆ ಎಂದು ವಿವರಿಸಿದರು.ಡಾ. ಬಿ.ಜಿ. ಜವಳಿ, ಡಾ. ಬಸವರಾಜ ಜಿ. ಪಾಟೀಲ, ಬಸವರಾಜ ಭೀಮಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.