ನಮ್ಮಣ್ಣ ಡಾನ್ ಮಾತಿನ ಭಾಗ ಪೂರ್ಣ

7

ನಮ್ಮಣ್ಣ ಡಾನ್ ಮಾತಿನ ಭಾಗ ಪೂರ್ಣ

Published:
Updated:

 ರವಿಜೋಶಿ ನಿರ್ಮಿಸುತ್ತಿರುವ `ನಮ್ಮಣ್ಣ ಡಾನ್~ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಮೂವತ್ತೆರಡು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಮೂರು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಸದ್ಯದಲ್ಲೇ ಹಾಡಿನ ಚಿತ್ರೀಕರಣ ಆರಂಭವಾಗಲಿದೆ.ರಮೇಶ್‌ಅರವಿಂದ್ ನಿರ್ದೇಶನದ ಈ ಚಿತ್ರಕ್ಕೆ ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದಾರೆ. ಈ.ಆರ್ ಭಾಸ್ಕರ್ ಛಾಯಾಗ್ರಹಣ, ಸೌಂದರ್‌ರಾಜ್ ಸಂಕಲನ ಚಿತ್ರಕ್ಕಿದೆ. ಸಂಭಾಷಣೆ ಬರೆಯುವಲ್ಲಿ ರಮೇಶ್‌ಅರವಿಂದ್ ಅವರಿಗೆ ಡಿ.ಬಿ.ಚಂದ್ರಶೇಖರ್ ಸಾಥ್ ನೀಡಿದ್ದಾರೆ.ತಾರಾಬಳಗದಲ್ಲಿ ರಮೇಶ್‌ಅರವಿಂದ್, ಮೋನಾ ಪರ್ವೇಜ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್‌ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರಿದ್ದಾರೆ.`ರೆಬಲ್~ನಲ್ಲಿ ಭರ್ಜರಿ ಸಾಹಸಅಂದು ಶಾಲೆಯಲ್ಲಿ ಸ್ವತಂತ್ರ ದಿನಾಚರಣೆಯ ಸಂಭ್ರಮ. ಧ್ವಜಾರೋಹಣಕ್ಕೆ ಆಗಮಿಸಿದ ರಾಜಕೀಯ ಗಣ್ಯರು. ಸಾವಿರಾರು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.ಇನ್ನೇನು ಧ್ವಜಾರೋಹಣ ಮಾಡಬೇಕು ಎನ್ನುವಷ್ಟರಲ್ಲಿ ಆ ಸ್ಥಳದಲ್ಲಿ ಉಗ್ರರು ದಾಳಿ ನಡೆಸುತ್ತಾರೆ. ನೆರೆದಿದ್ದ ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಗಣ್ಯರನ್ನು ಹತ್ಯೆ ಮಾಡುತ್ತಾರೆ.ಅಲ್ಲಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ನ್ಯಾಷನಲ್ ಸೆಕ್ಯುರಿಟಿ ಗಾರ್ಡನ್ನು ಕಳುಹಿಸಿಕೊಡಿ ಎಂದು ಕೇಳಿಕೊಂಡಾಗ ಆದಿತ್ಯ ಹಾಗೂ ತಂಡದವರು ಹೆಲಿಕಾಪ್ಟರ್ ಮೂಲಕ ಬಂದು ಸಾವಿರಾರು ಮಕ್ಕಳ ಪ್ರಾಣ ಉಳಿಸುತ್ತಾರೆ.

 

ಈ ಸನ್ನಿವೇಶವನ್ನು `ರೆಬಲ್~ ಚಿತ್ರಕ್ಕಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಚಿತ್ರಿಸಿಕೊಂಡರು. ನಾಯಕ ಆದಿತ್ಯ ಹಾಗೂ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸೆಲ್ವರಾಜ್ ಛಾಯಾಗ್ರಹಣ, ಜೆಸ್ಸಿಗಿಫ್ಟ್ ಸಂಗೀತ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಇರುವ `ರೆಬಲ್‌`ಗೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry