ಬುಧವಾರ, ಅಕ್ಟೋಬರ್ 16, 2019
26 °C

ನಮ್ಮಬೆಲೆ ಕಡಿಮೆ

Published:
Updated:

* ಏರಿಕೆ ಅನಿವಾರ್ಯವಾಗಿತ್ತೇ?

ಹೌದು. ಹಾಲಿನ ಉತ್ಪಾದನಾ ವೆಚ್ಚ ಏರುತ್ತಿದೆ. ರೈತರ ಕಷ್ಟ ನೋಡಲಾಗದೆ ಈ ತೀರ್ಮಾನಕ್ಕೆ ಬರಬೇಕಾಯಿತು.* ದರ ಹೆಚ್ಚು ಮಾಡಿ ಎಂದು ಹೈನುಗಾರರು ಕೇಳಿದ್ದರೆ?

ಜಿಲ್ಲಾ ಒಕ್ಕೂಟಗಳ ಮೂಲಕ ರೈತರು ಹಾಲಿನ ದರ ಹೆಚ್ಚು ಮಾಡಿ ಎಂದು ಮನವಿ ಮಾಡಿದ್ದರು. ಬೇರೆ ರಾಜ್ಯಗಳಲ್ಲಿ ರೈತರಿಗೆ ಹೈನುಗಾರಿಕೆ ಪ್ರಮುಖ ಆದಾಯವಾಗಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಜೀವನಾಧಾರ.* ಗ್ರಾಹಕರಿಗೆ ಹೊರೆ ಆಗಿದೆ ಅನ್ನಿಸುವುದಿಲ್ಲವೆ?

ಖಾಸಗಿ ಕಂಪೆನಿಗಳ ಹಾಲಿನ ಬೆಲೆ ನೋಡಿ (ಬಾಕ್ಸ್ 4). ಹೊರ ರಾಜ್ಯಗಳ ಸಹಕಾರ ಸಂಘಗಳ ದರವನ್ನು ಹೋಲಿಸಿ. ನಂದಿನಿ ಹಾಲಿನ ಬೆಲೆಯೇ ಕಡಿಮೆ. ನಾವು ಹೆಚ್ಚು ಲಾಭ ಇರಿಸಿಕೊಂಡಿಲ್ಲ.* ಆಡಳಿತ ವೆಚ್ಚ ಕಡಿಮೆ ಮಾಡುತ್ತಿರಾ?

ನಮ್ಮ ಲಾಭಾಂಶವೇ ಅತ್ಯಂತ ಕಡಿಮೆ. ನಾವು ಲೀಟರ್‌ಗೆ ರೂ. 2.50 ರಿಂದ 3ರಲ್ಲಿ ಸಂಸ್ಥೆಯನ್ನು ನಿರ್ವಹಣೆ ಮಾಡ್ತಿದ್ದೇವೆ. ಉಳಿದ ಕಡೆ ಈ ಪ್ರಮಾಣ ಲೀಟರ್‌ಗೆ ರೂ. 6ರಿಂದ 10 ಇದೆ. ಪ್ರತಿ ಸಲ ದರ ಏರಿಕೆ ಮಾಡಿದಾಗ ಹೈನುಗಾರ, ಗ್ರಾಹಕ, ಸಂಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡೇ ತೀರ್ಮಾನ ಮಾಡ್ತೀವಿ.ಎ.ಎಸ್.ಪ್ರೇಮನಾಥ್ (ಕೆಎಂಎಫ್ ಎಂಡಿ)

Post Comments (+)