ನಮ್ಮ ಕೇಬಲ್ ನಿಖರವಾಗಿರುತ್ತದೆ: ಮಲ್ಫೋರ್ಡ್
ನವದೆಹಲಿ (ಐಎಎನ್ಎಸ್): ‘ಸಾಮಾನ್ಯವಾಗಿ ರಾಯಭಾರ ಕಚೇರಿಯಿಂದ ನಮ್ಮ ವಿದೇಶಾಂಗ ಇಲಾಖೆಗೆ ರವಾನೆಯಾಗುವ ರಾಜತಾಂತ್ರಿಕ ಕೇಬಲ್ಗಳು ನಿಖರವಾಗಿಯೇ ಇರುತ್ತವೆ’ಎಂದು ಅಮೆರಿಕದ ಮಾಜಿ ರಾಯಭಾರಿ ಡೇವಿಡ್ ಮಲ್ಫೋರ್ಡ್ ಶುಕ್ರವಾರ ಹೇಳಿದ್ದಾರೆ.ಇದರಿಂದ ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ‘ವೋಟಿಗಾಗಿ ನೋಟು ’ಪ್ರಕರಣಕ್ಕೆ ಹೊಸ ತಿರುವು ಬಂದಂತಾಗಿದೆ.
‘ಈನಿರ್ದಿಷ್ಟ ಪ್ರಕರಣದ ಬಗ್ಗೆ ಏನೂ ಪ್ರತಿಕ್ರಿಯಿಸಲಾರೆ. ಸದನಕ್ಕೆ ಸೂಟ್ಕೇಸ್ ಹಿಡಿದು ಬಂದ ಸದಸ್ಯರೊಬ್ಬರು ಅದರಲ್ಲಿದ್ದ ಹಣವನ್ನು ಸುರಿದಿದ್ದ ಸಂಗತಿ ಮಾತ್ರ ನನ್ನ ನೆನಪಿನಲ್ಲಿದೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.