ಬುಧವಾರ, ಜುಲೈ 15, 2020
27 °C

ನಮ್ಮ ಪುರದಜ್ಜಿ ಶತಾಯುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಪುರದಜ್ಜಿ ಶತಾಯುಷಿ

ಶಿವಮೊಗ್ಗ: ತಾಲ್ಲೂಕಿನ ಬೇಡರ ಹೊಸಹಳ್ಳಿಯಲ್ಲಿ ಶತಾಯುಷಿ ಪುರದಮ್ಮ ಅವರನ್ನು ಈಚೆಗೆ ಕುಟುಂಬದ ಸದಸ್ಯರು ‘ನಮ್ಮ ಪುರದಜ್ಜಿ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಹಿರಿಯಜ್ಜಿಗೆ ಗೌರವಿಸಿದರು. 105 ವರ್ಷಗಳನ್ನು ಪೂರೈಸಿದ ಹಿರಿಯ ಜೀವಕ್ಕೆ ಕುಟುಂಬದ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಸೇರಿದಂತೆ ಒಟ್ಟು 41ಜನರ ತುಂಬು ಕುಟುಂಬ ಆತ್ಮೀಯವಾಗಿ ಗೌರವಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಕುಟುಂಬದ ಸದಸ್ಯರು, ಪುರದಮ್ಮಗೆ ಮಕ್ಕಳಿಲ್ಲ. ಆದರೆ, ಸಾಕುಮಕ್ಕಳನ್ನು ಮೊಮ್ಮಕ್ಕಳನ್ನು ಲಾಲನೆ-ಪೋಷಣೆ ಮಾಡಿ, ಪ್ರೀತಿ-ಅಂತಃಕರಣ ಮೆರೆದಿದ್ದಾರೆ.

ಅಲ್ಲದೇ, ಹಳ್ಳಿಯಲ್ಲಿಯೂ ಹೆರಿಗೆ ಮಾಡಿಸುವುದು, ಸಂಸ್ಕಾರ, ವಿಧಿ-ವಿಧಾನಗಳನ್ನು ತಿಳಿಸಿಕೊಡುವುದರ ಜತೆಗೆ ಹತ್ತುಹಲವು ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು. ಮನುಷ್ಯ ಸಂಘಜೀವಿ. ಸಮಾಜದಲ್ಲಿ ಸಹಬಾಳ್ವೆ, ಪ್ರೀತಿ-ವಿಶ್ವಾಸಗಳಿಂದ ಬದುಕಬೇಕು. ಇದಕ್ಕೆ ಪುರದಮ್ಮ ಆದರ್ಶವಾಗಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.