ನಮ್ಮ ಸಂಘ ಉಳಿಯಲಿ

ಬುಧವಾರ, ಜೂಲೈ 17, 2019
29 °C

ನಮ್ಮ ಸಂಘ ಉಳಿಯಲಿ

Published:
Updated:

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಸುತ್ತಮುತ್ತಲಿನ 220 ಗ್ರಾಮದ 30 ಸಾವಿರ ಕುಟುಂಬಗಳು ಪ್ರತಿ ನಿತ್ಯ ಮೂರು ಲಕ್ಷ ಕೆ.ಜಿ.ಯಷ್ಟು ಮರವನ್ನು ಉರುವಲಿಗಾಗಿ ಬಳಸುತ್ತಿತ್ತು.ಇದನ್ನು ಮನಗಂಡ ಪರಿಸರವಾದಿ ಹಾಗೂ ಅಂತರ ರಾಷ್ಟ್ರಪ್ರಶಸ್ತಿ ಪುರಸ್ಕೃತ ಛಾಯಾ ಗ್ರಾಹಕರಾದ ಕೃಪಾಕರ ಮತ್ತು ಸೇನಾನಿಯವರು ಸಮಾನ ಮನಸ್ಕರ ಸಹಕಾರದೊಂದಿಗೆ ಹತ್ತು ವರ್ಷಗಳ ಹಿಂದೆಯೇ `ನಮ್ಮ ಸಂಘ~ ಎಂಬ ಪರಿಸರ ಉಳಿಸಿ ಸಂಸ್ಥೆಯೊಂದನ್ನು ಸ್ಥಾಪಿಸಿ ಆ ಮೂಲಕ ಉರುವಲಿಗಾಗಿ ಮರಗಳನ್ನು ಕಡಿದು ಅರಣ್ಯ ನಾಶ ಮಾಡದಂತೆ ಆಂದೋಲನವೊಂದನ್ನು ರೂಪಿಸಿದರು.  ಸಮಾನ ಮನಸ್ಕರಿಂದ 65 ಲಕ್ಷ ರೂ. ಬಂಡವಾಳ ಸಂಗ್ರಹಿಸಿ ಅಡುಗೆ ಅನಿಲ (ಎಲ್. ಪಿ.ಜಿ.) ಏಜೆನ್ಸಿಯೊಂದನ್ನು ಹೋರಾಟ ಮಾಡಿ ಪಡೆದುಕೊಂಡು 30 ಸಾವಿರ ಕುಟುಂಬಗಳಿಗೆ ಯಾವುದೇ ನಿರ್ವಹಣಾ ವೆಚ್ಚವಿಲ್ಲದೆ ಎಲ್. ಪಿ.ಜಿ. ಸಂಪರ್ಕ ಕಲ್ಪಿಸಿದರು. ಆದರೆ ರಿಯಲ್ ಎಸ್ಟೇಟ್ ದಂಧೆ ನಡೆಸುವ ಕೆಲವು ಕಿಡಿಗೇಡಿಗಳು ಬೆಂಗಳೂರಿನಿಂದ ಬಂಡೀಪುರಕ್ಕೆ ಆಗಮಿಸಿ ರೆಸಾರ್ಟ್ ನಿರ್ಮಿಸಲು ಅಣಿಯಾಗುತ್ತಿದ್ದಾರೆ.ಇದಕ್ಕೆ ಅಡ್ಡಿಪಡಿಸಿದ ನಮ್ಮ ಸಂಘದ ಅಸ್ತಿತ್ವ ಅಲುಗಾಡಿಸುತ್ತಿರುವುದು ಇತ್ತೀಚಿನ ಆತಂಕಕಾರಿ ಬೆಳವಣಿಗೆಯಾಗಿದೆ. ಕೃಪಾಕರ ಸೇನಾನಿ ಮತ್ತು ಪರಿಸರವಾದಿಗಳಿಗೆ ಜೀವ ಭಯ ಉಂಟು ಮಾಡಿರುವ ಕಿಡಿಗೇಡಿಗಳು ಕಳೆದವಾರ ರಾತ್ರೋ ರಾತ್ರಿ ಆರು ಎಕರೆ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ ಮರಗಳನ್ನು ಇದು ಕಂದಾಯ ಭೂಮಿ ಎಂದು ಉಯಿಲೆಬ್ಬಿಸಿ ಮರಗಳನ್ನು ಕಡಿದು ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿರುವುದು ಆತಂಕದ ವಿಚಾರವಾಗಿದೆ.   `ನಮ್ಮ ಸಂಘ~ ವನ್ನು ಮುಗಿಸಲು ಗಿರಿಜನರನ್ನು ಎತ್ತಿಕಟ್ಟುವಲ್ಲಿ ಭೂ ಮಾಫಿಯ ಮೇಲುಗೈ ಸಾಧಿಸುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯವರು ತಕ್ಷಣವೇ ಕೃಪಾಕರ ಮತ್ತು ಸೇನಾನಿಯವರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ. ಹಾಗೂ ಇಲ್ಲಿ ಸ್ವಚ್ಛಂದವಾಗಿ ಜೀವಿಸುತ್ತಿರುವ ಆನೆ, ಹುಲಿ, ಜಿಂಕೆ, ಕಾಡೆಮ್ಮೆ ಮುಂತಾದ ವನ್ಯಜೀವಿಗಳಿಗೆ ಭೂಗಳ್ಳರಿಂದ ರಕ್ಷಣೆ ನೀಡಿ `ನಮ್ಮ ಸಂಘ~ ಉಳಿಯುವಂತೆ ಮಾಡಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry