ನಮ್ಮ ಸ್ಥಿತಿ ಯಾರಿಗೂ ಬೇಡ

7

ನಮ್ಮ ಸ್ಥಿತಿ ಯಾರಿಗೂ ಬೇಡ

Published:
Updated:

2007ರಲ್ಲಿ ಕರ್ನಾಟಕ ಲೋಕಸೇವಾ ಆಯೋಗವು 629 ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳ ನೇಮಕಾತಿಗೆ  ಅಧಿಸೂಚನೆ ಹೊರಡಿಸಿತ್ತು. 2008 ರಲ್ಲಿ ಸುಮಾರು ಒಂದು ಲಕ್ಷ ಅಭ್ಯರ್ಥಿಗಳು ಪ್ರಿಲಿಮಿನರಿ ಪರೀಕ್ಷೆ ಬರೆದು 1:20 ಅನುಪಾತದಲ್ಲಿ 12580 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾದರು. 2008ರ ಕೊನೆಯಲ್ಲಿ ಮುಖ್ಯ ಪರೀಕ್ಷೆ ನಡೆಯಿತು.

 

ಇದರಲ್ಲಿ 1:5ರ ಅನುಪಾತದಲ್ಲಿ 3145 ಅಭ್ಯರ್ಥಿಗಳು ಅರ್ಹತೆ ಪಡೆದರು. ಸಂದರ್ಶನದ ನಂತರ  629 ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿ, 2010 ರಲ್ಲಿ ಯ್ಕೆ ಪಟ್ಟಿ ಪ್ರಕಟಿಸಲಾಯಿತು.

 

ಮಾರ್ಚ್ 2011 ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ರಾಜ್ಯಪಾಲರ ಅಂಕಿತದೊಂದಿಗೆ ಪಟ್ಟಿ ಪ್ರಕಟವಾಯಿತು. ಆದರೆ ಇದುವರೆಗೆ ನೇಮಕಾತಿ ಆದೇಶ ಪತ್ರ ಕೈಸೇರಿಲ್ಲ. ಆಯ್ಕೆಯಾದ 629 ಅಭ್ಯರ್ಥಿಗಳಲ್ಲಿ ಈಗಾಗಲೇ ಒಬ್ಬರು ಮೃತಪಟ್ಟಿದ್ದಾರೆ. ನಮಗೆ ಆದೇಶ ಪತ್ರ ಸಿಗುವುದು ಯಾವಾಗ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry