ಶನಿವಾರ, ಡಿಸೆಂಬರ್ 7, 2019
22 °C
ಮಿನುಗು ಮಿಂಚು

ನಮ್ಮ ಹಾಕಿ ಲೀಗ್

Published:
Updated:
ನಮ್ಮ ಹಾಕಿ ಲೀಗ್

ಇದೇ ವರ್ಷ ಜನವರಿ 14ರಿಂದ ಫೆಬ್ರುವರಿ 10ರವರೆಗೆ ಮೊದಲ ಹಾಕಿ ಇಂಡಿಯಾ ಲೀಗ್ ನಡೆಯಿತು. ಹಾಕಿಯನ್ನು ದೇಶದಲ್ಲಿ ಪುನರುತ್ಥಾನಗೊಳಿಸುವ ಉದ್ದೇಶದ ಟೂರ್ನಿ ಇದು.

ಅದರಲ್ಲಿ ಯಾವ್ಯಾವ ತಂಡಗಳು ಆಡಿದವು?

ಡೆಲ್ಲಿ ವೇವ್ ರೈಡರ್ಸ್‌, ಮುಂಬೈ ಮ್ಯಾಜಿಷಿಯನ್ಸ್, ಪಂಜಾಬ್ ವಾರಿಯರ್ಸ್‌, ರಾಂಚಿ ರೈನೋಸ್ ಹಾಗೂ ಉತ್ತರ ಪ್ರದೇಶ್ ವಿಜಾರ್ಟ್ಸ್ ಹೆಸರಿನ ತಂಡಗಳು ಆಡಿದವು.

ಪ್ರತಿ ತಂಡದಲ್ಲಿ ಎಷ್ಟು ಆಟಗಾರರಿದ್ದರು?

ಪ್ರತಿ ತಂಡದಲ್ಲಿ 24 ಆಟಗಾರರಿದ್ದರು. ಆ ಪೈಕಿ ಹದಿನಾಲ್ಕು ಆಟಗಾರರು ಭಾರತೀಯರು, ಹತ್ತು ಮಂದಿ ವಿದೇಶೀಯರು.

ಮೊದಲ ಋತುವಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರರು ಯಾರು?

ಹಾಲೆಂಡ್‌ನ ಟ್ಯುನ್ ಡಿ ನೂಯ್ಜರ್ ಅತಿ ಹೆಚ್ಚು ಸಂಭಾವನೆ ಪಡೆದ ವಿದೇಶಿ ಆಟಗಾರ. ಉತ್ತರ ಪ್ರದೇಶ ವಿಜಾರ್ಟ್ಸ್ ತಂಡದವರು ಅವರನ್ನು ಹರಾಜಿನಲ್ಲಿ ಆಡಲು ಪಡೆದರು. ಅತಿ ಹೆಚ್ಚು ಸಂಭಾವನೆ ಪಡೆದ ಭಾರತದ ಆಟಗಾರ ಸರ್ದಾರ್ ಸಿಂಗ್ (ಈಗಿನ ಭಾರತ ತಂಡದ ನಾಯಕ). ಡೆಲ್ಲಿ ವೇವ್ ರೈಡರ್ಸ್‌ ಪರವಾಗಿ ಸರ್ದಾರ್ ಆಡಿದರು.

ಅತಿ ಹೆಚ್ಚು ಗೋಲುಗಳನ್ನು ಗಳಿಸಿದ್ದು ಯಾರು?

ಮುಂಬೈ ಮ್ಯಾಜಿಷಿಯನ್ಸ್ ತಂಡದ ಸಂದೀಪ್ ಸಿಂಗ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲುಗಳನ್ನು (11) ಗಳಿಸಿದರು. ಆದರೆ, ಅವರ ತಂಡ ಟೂರ್ನಿಯಲ್ಲಿ ಕೊನೆಯ ಸ್ಥಾನದಿಂದ ಮೇಲೇರಲೇ ಇಲ್ಲ.

ಟೂರ್ನಿಯನ್ನು ಗೆದ್ದದ್ದು ಯಾವ ತಂಡ?

ರಾಂಚಿ ರೈನೋಸ್ ತಂಡವು ಡೆಲ್ಲಿ ವೇವ್ ರೈಡರ್ಸ್‌ ವಿರುದ್ಧ ನಡೆದ ಫೈನಲ್ಸ್‌ನಲ್ಲಿ 4-1ರಲ್ಲಿ ಗೆಲುವು ದಾಖಲಿಸಿತು. ಆ ಪಂದ್ಯ ನಡೆದದ್ದು ರಾಂಚಿಯ ಆಸ್ಟ್ರೋಟರ್ಫ್ ಹಾಕಿ ಕ್ರೀಡಾಂಗಣದಲ್ಲಿ.

ಪ್ರತಿಕ್ರಿಯಿಸಿ (+)