ನರಗುಂದ: ಅಂಗವಿಕಲರ ಕ್ರೀಡಾಕೂಟದ ಫಲಿತಾಂಶ

7

ನರಗುಂದ: ಅಂಗವಿಕಲರ ಕ್ರೀಡಾಕೂಟದ ಫಲಿತಾಂಶ

Published:
Updated:

ನರಗುಂದ: ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಶೈಲೇಶ ಉಕ್ಕಲಿ ಸ್ಮರಣಾರ್ಥ ನಡೆದ  ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಬಹುಮಾನ ವಿತರಿಸಿದರು.ಕ್ರೀಡಾಕೂಟದ ಫಲಿತಾಂಶ

ಬಾಲಕರ ವಿಭಾಗ : 100 ಮೀ ಓಟ :

ಶರಣಪ್ಪ ಐನಾಪೂರ ಪ್ರಥಮ, ಹೇಮಂತ ಬ್ಯಾಹಟ್ಟಿ ದ್ವಿತೀಯ, ಮಲ್ಲಿಕಾರ್ಜುನ ಚಿಕ್ಕನ್ನವರ ತೃತೀಯ.

ಗುಂಡು ಎಸೆತ: ವೆಂಕಣ್ಣ ಕತ್ತಿ ಪ್ರಥಮ, ಶಂಭುಲಿಂಗಪ್ಪ ಶಲವಡಿ ದ್ವಿತೀಯ, ನಾಗರಾಜ ಲಕ್ಕಣ್ಣವರ ತೃತೀಯ.

ಉದ್ದ ಜಿಗಿತ: ಹನಮಂತ ಬನ್ನೂರು ಪ್ರಥಮ,  ಶಾಂತಯ್ಯ ಕುಲಕರ್ಣಿ ದ್ವಿತೀಯ, ಯಮನಪ್ಪ ಸುಣಗಾರ ತೃತೀಯ ಸ್ಥಾನ  ಪಡೆದಿದ್ದಾರೆ.ಬಾಲಕಿಯರ ವಿಭಾಗ :  ಗುಂಡು ಎಸೆತ  ಶೋಭಾ ತಲವಾಯಿ ಪ್ರಥಮ, ಲಕ್ಷ್ಮಿ ತೆಗ್ಗಿನಮನಿ ದ್ವಿತೀಯ, ದೇವಕ್ಕ ಕರಿಗೌಡ್ರ ತೃತೀಯ. 100 ಮೀ ಓಟ: ಪೂರ್ಣಿಮಾ ಎರೆಕಿತ್ತೂರು ಪ್ರಥಮ, ಲಕ್ಷ್ಮಿ ಪೂಜಾರ ದ್ವಿತೀಯ ಸ್ಥಾನ ಪಡೆದರು.ಬಹುಮಾನ ವಿತರಣಾ ಸಮಾರಂಭ ದಲ್ಲಿ   ಅಂತರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಘನಶ್ಯಾಮ ಬಾಂಡಗೆ,   ಪಿ.ಸಿ.ಕಲಹಾಳ, ಡಿ.ಎಚ್. ಅಜ್ಜಿ ಮಾತನಾಡಿದರು.ಸಮನ್ವಯಾ ಧಿಕಾರಿ  ಪಿ.ಎಫ್. ಸೊಲಾಪೂರಿ,  ದೈಹಿಕ ಶಿಕ್ಷಣಾಧಿಕಾರಿ ಎಸ್. ಎಂ. ಉಕ್ಕಲಿ, ಮುದಕನಗೌಡ್ರ ಉಪಸ್ಥಿತರಿದ್ದರು. 

ಶಾಂತಕುಮಾರ ಭಜಂತ್ರಿ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry