ನರಭಕ್ಷಕ ಹುಲಿ: ಶಾಲೆಗಳಿಗೆ ರಜೆ

6

ನರಭಕ್ಷಕ ಹುಲಿ: ಶಾಲೆಗಳಿಗೆ ರಜೆ

Published:
Updated:

ಊಟಿ (ತಮಿಳುನಾಡು) (ಪಿಟಿಐ): ಇಲ್ಲಿನ ಪ್ರವಾಸಿ ತಾಣಗಳಲ್ಲಿ ಬೇಟೆಗಾಗಿ ಅಲೆ­ಯುತ್ತಿರುವ ನರಭಕ್ಷಕ ಹುಲಿ ಕಳೆದ ಕೆಲವು ದಿನಗಳಲ್ಲಿ ಇಬ್ಬರು ಮಹಿಳೆ­ಯರು ಸೇರಿದಂತೆ ಮೂವರನ್ನು ಹತ್ಯೆ ಮಾಡಿದೆ.ದೊಡ್ಡ ಬೆಟ್ಟ ಪ್ರವಾಸಿ ತಾಣಕ್ಕೆ ಪ್ರವೇಶ ನಿಲ್ಲಿಸಲಾಗಿದ್ದು, ಇಲ್ಲಿನ 3 ಪಂಚಾಯಿ­ತಿ­ಗಳಿಗೆ ಸೇರಿದ 45 ಶಾಲೆಗಳಿಗೆ 2 ದಿನ ರಜೆ ಘೋಷಿಸಲಾಗಿದೆ. ಕಳೆದ ಐದು ದಿನಗಳಿಂದ ದೊಡ್ಡಬೆಟ್ಟ ವ್ಯಾಪ್ತಿಯ 25 ಕಿ.ಮೀ ಸುತ್ತ ಮುತ್ತಲ ಪ್ರದೇಶ

ಗಳಲ್ಲಿ ಓಡಾಡುತ್ತಿರುವ ಹುಲಿಯನ್ನು ಸೆರೆಹಿಡಿಯಲು ಮೂರು ವಿಶೇಷ ತಂಡ ರಚಿಸಲಾ­ಗಿದೆ ಎಂದು ನೀಲಗಿರಿಸ್‌ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಶಂಕರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry