ನರಭಕ್ಷಣೆಯ ಕುರುಹು!

7

ನರಭಕ್ಷಣೆಯ ಕುರುಹು!

Published:
Updated:

ಲಂಡನ್, (ಪಿಟಿಐ): ಮೆಕ್ಸಿಕೊದ ಪ್ರಾಚೀನ ಬುಡಕಟ್ಟು ವಾಸಿಗಳು ನರಭಕ್ಷಕರಾಗಿದ್ದರೇ?

ಈ ದೇಶದ ಉತ್ತರ ಭಾಗದಲ್ಲಿನ ಡುರಂಗೋದಲ್ಲಿ ಪ್ರಾಚ್ಯವಸ್ತು ಸಂಶೋಧಕರು ಮಾನವ ಮೂಳೆಗಳನ್ನು ಹುದುಗಿಸಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿದ್ದು, ಇದು ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ.ನರಭಕ್ಷಣೆಯಿಂದ ಉತ್ತಮ ಬೆಳೆಯಾಗುವುದೆಂಬ ನಂಬಿಕೆಯ ಮೇಲೆ ಈ ಜನಾಂಗ ಈ ಕೃತ್ಯವೆಸಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ. ಸುಮಾರು 1425 ವರ್ಷಗಳ ಹಿಂದೆ ಈ ಬುಡಕಟ್ಟು ಜನಾಂಗ ಮೂರು ಡಜನ್‌ಗೂ ಹೆಚ್ಚು ಮಾನವರ ಮಾಂಸವನ್ನು ಬೇಯಿಸಿ ತಿಂದ ಕುರುಹುಗಳಿವೆ ಎಂದು ಪ್ರಾಚ್ಯ ವಸ್ತು ಸಂಶೋಧಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry