ನರಮೇಧದ ಕಳಂಕ ತಪ್ಪದು

7

ನರಮೇಧದ ಕಳಂಕ ತಪ್ಪದು

Published:
Updated:
ನರಮೇಧದ ಕಳಂಕ ತಪ್ಪದು

ಲಂಡನ್ (ಪಿಟಿಐ): `ಗುಜರಾತ್‌ನಲ್ಲಿ ಬಂಡವಾಳ ಹೂಡಲು ಬ್ರಿಟನ್ ಮತ್ತಿತರ ದೇಶಗಳು ತೆಗೆದುಕೊಂಡ ನಿರ್ಧಾರವು,  2002ರಲ್ಲಿ ಅಲ್ಲಿ ನಡೆದ ನರಮೇಧದ ಕಳಂಕವನ್ನು ತೊಡೆದು ಹಾಕಲು ಸಾಧ್ಯವಿಲ್ಲ~ ಎಂದು ಬ್ರಿಟನ್‌ನ ಪ್ರಮುಖ ಪತ್ರಿಕೆ  `ದಿ ಫೈನಾನ್ಸಿಯಲ್ ಟೈಮ್ಸ~ ಸಂಪಾದಕೀಯದಲ್ಲಿ ಟೀಕಿಸಿದೆ.2002ರಲ್ಲಿ ಗೋಧ್ರಾ ಹತ್ಯಾಕಾಂಡ ಮತ್ತು ಬಳಿಕ ನಡೆದ ಕೋಮುಗಲಭೆ ಸಂದರ್ಭದಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದರು. ಇದೇ ಕಾರಣಕ್ಕಾಗಿ ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ಪರೋಕ್ಷವಾಗಿ ಅವರಿಗೆ ಬಹಿಷ್ಕಾರ ಹಾಕಿದ್ದವು.ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಪತ್ರಿಕೆಯು ಮೋದಿ ಬಗ್ಗೆ ಕಟುವಾಗಿ ಟೀಕಿಸಿದೆ.ಗೋಧ್ರಾ ಹತ್ಯಾಕಾಂಡದ ಬಗ್ಗೆ ಮೋದಿ ಪಶ್ಚಾತ್ತಾಪ ಪಟ್ಟುಕೊಂಡಿಲ್ಲ ಮತ್ತು ಕ್ಷಮೆ ಕೇಳಿಲ್ಲ~ ಎಂದು `ಗುಜರಾತ್ಸ್ ಶೇಮ್, ರೀ ಹ್ಯಾಬಿಲಿಟೇಷನ್ ಡಸ್ ನಾಟ್ ಅಬ್ಸಾಲ್ವ್~ ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ಆರೋಪಿಸಿದೆ.

`ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿರುವುದರಿಂದ ಮೋದಿ ಬಲ ಹೆಚ್ಚಬಹುದು. ಸಂಭಾವ್ಯ ಪ್ರಧಾನಿ ಎಂದು ಬಿಂಬಿತವಾಗಿರುವ ಅವರಿಗೆ 2014ರ ಚುನಾವಣೆಯಲ್ಲಿ ಅವಕಾಶ ತೆರೆದುಕೊಳ್ಳಬಹುದು. ಆದರೆ ಗೋಧ್ರಾ ಕಳಂಕ ತೊಡೆದುಕೊಳ್ಳಲು ಸಾಧ್ಯವಿಲ್ಲ~ ಎಂದು ಅದು ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry