ಬುಧವಾರ, ನವೆಂಬರ್ 13, 2019
17 °C

`ನರಮೇಧ' ಒಪ್ಪದ ಅಮೆರಿಕ

Published:
Updated:

ವಾಷಿಂಗ್ಟನ್(ಐಎಎನ್‌ಎಸ್): ಭಾರತದಲ್ಲಿ 1984ರ ನವೆಂಬರ್‌ನಲ್ಲಿ ನಡೆದ ಸಿಖ್ಖರ ಹತ್ಯಾಕಾಂಡವನ್ನು ಖಂಡಿಸುವುದಾಗಿ ತಿಳಿಸಿರುವ ಶ್ವೇತ ಭವನ,  ಧರ್ಮದ ಆಧಾರದ ಮೇಲೆ ಜನರ ಮೇಲೆ ನಡೆಯುವ ಹಿಂಸಾಚಾರದ ವಿರುದ್ಧ ಕೆಲಸ ನಿರ್ವಹಿಸುವುದಾಗಿ ಹೇಳಿದೆ. ಆದರೆ, ಆ ಘಟನೆಯನ್ನು `ಸಾಮೂಹಿಕ ನರಮೇಧ' ಎಂದು ಕರೆಯಲು ಅದು ನಿರಾಕರಿಸಿದೆ.1984ರಲ್ಲಿ ನಡೆದ ಘಟನೆಯನ್ನು `ಸಾಮೂಹಿಕ ನರಮೇಧ' ಎಂಬುದಾಗಿ ಪರಿಗಣಿಸುವಂತೆ ಆಗ್ರಹಿಸಿ ಇತ್ತೀಚಿಗೆ ನ್ಯೂಯಾರ್ಕ್ ಮೂಲದ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಮಾಡಿದ ಮನವಿಗೆ ಶ್ವೇತ ಭವನ ಈ ರೀತಿ ಪ್ರತಿಕ್ರಿಯಿಸಿದೆ.`ಪ್ರತಿಯೊಬ್ಬರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಇದು ನಮ್ಮ ವಿದೇಶಾಂಗ ನೀತಿಯ ಭಾಗ ಕೂಡ ಆಗಿದೆ. ಜಗತ್ತಿನಾದ್ಯಂತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಕಾಲಕಾಲಕ್ಕೆ ನಮ್ಮ ರಾಜತಾಂತ್ರಿಕರು ಧ್ವನಿ ಎತ್ತಿದ್ದಾರೆ' ಎಂದಿದೆ.`ಆದರೆ ನರಮೇಧಕ್ಕೆ  ಸಂಬಂಧಿಸಿದಂತೆ ವಿಶ್ವಸಂಸ್ಥೆ ಸಮಾವೇಶದ 1 ಮತ್ತು 2ನೇ ಕಲಂ ಪ್ರಕಾರ ಅಮೆರಿಕ ತನ್ನ ನಿಲುವು ಸ್ಪಷ್ಟಪಡಿಸುವಲ್ಲಿ ಒಬಾಮ ಆಡಳಿತ ವಿಫಲವಾಗಿದೆ ಎಂದು  ಎಸ್‌ಎಫ್‌ಜೆ  ಅಸಮಾಧಾನ ವ್ಯಕ್ತಪಡಿಸಿದೆ.

ಪ್ರತಿಕ್ರಿಯಿಸಿ (+)