ನರಸಾಪುರ ಘಟಕ; 4000 ಉದ್ಯೋಗ

7

ನರಸಾಪುರ ಘಟಕ; 4000 ಉದ್ಯೋಗ

Published:
Updated:
ನರಸಾಪುರ ಘಟಕ; 4000 ಉದ್ಯೋಗ

ಬೆಂಗಳೂರು: `ಹೋಂಡಾ ಆಕ್ಟಿವಾ~ ಸ್ಕೂಟರ್ ಮೂಲಕ ಹೆಚ್ಚು ಜನಪ್ರಿಯವಾಗಿರುವ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ `ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯ ಪ್ರೈ.ಲಿ.~(ಎಚ್‌ಎಂಎಸ್‌ಐ) ಕೋಲಾರ ಜಿಲ್ಲೆಯ ನರಸಾಪುರದಲ್ಲಿ ನಿರ್ಮಿಸುತ್ತಿರುವ `ದ್ವಿಚಕ್ರ ವಾಹನ ತಯಾರಿಕಾ ಘಟಕ~ದಲ್ಲಿ 4000 ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ.ನರಸಾಪುರದಲ್ಲಿ ನೆಲೆಗೊಳ್ಳುತ್ತಿರುವುದು ಭಾರತದಲ್ಲಿನ `ಹೋಂಡಾ~ದ ಮೂರನೇ ಘಟಕವಾಗಿದ್ದು, 2013ರ ಜುಲೈನಲ್ಲಿ ಕಾರ್ಯಾರಂಭ ಮಾಡಲಿದ್ದು, ಇಲ್ಲಿ ಮೋಟಾರ್ ಬೈಕ್ ಮತ್ತು ಸ್ಕೂಟರ್ ಎರಡೂ ತಯಾರಾಗಲಿವೆ ಎಂದು `ಎಚ್‌ಎಂಎಸ್‌ಐ~ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪ ನಿರ್ದೇಶಕ ತೊಮೊಕಿ ನಾಗಯಾಮ ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕರ್ನಾಟಕದ ಮಾರುಕಟ್ಟೆಗೆ 110 ಸಿಸಿ ಸಾಮರ್ಥ್ಯದ `ಹೋಂಡಾ ಡ್ರೀಮ್ ಯುಗ~ ಮೋಟಾರ್‌ಬೈಕ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನರಸಾಪುರ ಘಟಕಕ್ಕೆ ಆರಂಭಿಕ ಬಂಡವಾಳವಾಗಿ ರೂ1500 ಕೋಟಿ ತೊಡಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಡವಾಳ ವಿನಿಯೋಜಿಸಲಾಗುವುದು ಎಂದರು.

ಕೋಲಾರ ಜಿಲ್ಲೆಯಲ್ಲಿನ ಈ ಘಟಕ ಆರಂಭದಲ್ಲಿ ವರ್ಷಕ್ಕೆ 12 ಲಕ್ಷ ದ್ವಿಚಕ್ರ ವಾಹನಗಳನ್ನು ತಯಾರಿಸಲಿದ್ದು, ನಂತರದಲ್ಲಿ ಇದನ್ನು 18 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದರು.ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 2011-12ರಲ್ಲಿ ಒಟ್ಟು 1.20 ಕೋಟಿ ಮೋಟಾರ್‌ಬೈಕ್ ಮತ್ತು ಸ್ಕೂಟರ್‌ಗಳು ಮಾರಾಟವಾಗಿದ್ದು, ಈ ವರ್ಷ 1.30 ಕೋಟಿಗೆ ಹೆಚ್ಚುವ ನಿರೀಕ್ಷೆ ಇದೆ. ಸದ್ಯ ಇಲ್ಲಿನ ಮಾರುಕಟ್ಟೆಯಲ್ಲಿ `ಹೋಂಡಾ~ ದ್ವಿಚಕ್ರ ವಾಹನಗಳ ಪಾಲು ಶೇ 15ರಷ್ಟಿದೆ ಎಂದು `ಎಚ್‌ಎಂಎಸ್‌ಐ~ನ ದಕ್ಷಿಣ ಭಾರತ ವಲಯ ಮಾರಾಟ ವ್ಯವಸ್ಥಾಪಕ ಅಶೀಷ್ ಚೌಧರಿ ಪ್ರಶ್ನೆಗೆ ಉತ್ತರಿಸಿದರು.8.5 ಬಿಎಚ್‌ಪಿ, ಲೀಟರ್‌ಗೆ 72 ಕಿ.ಮೀ. ಮೈಲೇಜ್ ಸಾಮರ್ಥ್ಯದ `ಹೋಂಡಾ ಡ್ರೀಮ್ ಯುಗ~ ಬೈಕ್ ರೂ47087 ಮತ್ತು ರೂ48560 ಹಾಗೂ ರೂ49717(ಬೆಂಗಳೂರು ಎಕ್ಸ್ ಷೋರೂಂ ಬೆಲೆ)ಗೆ ಲಭ್ಯವಿದೆ. ಪ್ರಸಕ್ತ ಹಣಕಾಸು ವರ್ಷ ಕಂಪೆನಿ ಭಾರತದಲ್ಲಿ ಒಟ್ಟು 27 ಲಕ್ಷ ದ್ವಿಚಕ್ರ ವಾಹನ ಮಾರಾಟದ ಗುರಿ ಇಟ್ಟುಕೊಂಡಿದೆ ಎಂದು ಚೌಧರಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry