ಭಾನುವಾರ, ಆಗಸ್ಟ್ 18, 2019
24 °C

ನರಸಿಂಹರಾಜಪುರ: ಮುಂದುವರೆದ ಮಳೆ

Published:
Updated:

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಬುಧವಾರವೂ ಸಹ ಮಳೆ ಮುಂದು ವರೆದಿತ್ತು. ಮಂಗಳವಾರ ರಾತ್ರಿ ಇಡಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು 35 ಮಿ.ಮೀ ಮಳೆಯಾಗಿದೆ.ನಿರಂತರವಾಗಿ ಮಳೆ ಸುರಿಯುತ್ತಿ ರುವುದರಿಂದ ಶುಂಠಿ, ಬಾಳೆ, ಅಡಿಕೆ ಬೆಳೆಗಳಿಗೆ ಕೊಳೆ ರೋಗ ತಗಲುವ ಭೀತಿ ಉಂಟಾಗಿದೆ.ಹೆಚ್ಚಿನ ನೀರು ಗದ್ದೆಯಲ್ಲಿ ತುಂಬಿಯಿರುವುದರಿಂದ ಬತ್ತದ ನಾಟಿ ಕಾರ್ಯಕ್ಕೂ ಹಿನ್ನಡೆಯಾಗಿದೆ.ಕಳೆದ ವರ್ಷದ ಡಿಸೆಂಬರ್ ತಿಂಗಳವರೆಗೆ ಆಗಿದ್ದ ಮಳೆಯ ಪ್ರಮಾಣ ಈ ವರ್ಷ ಜುಲೈ 26ಕ್ಕೆ ಆಗಿದೆ. ಜುಲೈ 26ರವರೆಗೆ 56 ಇಂಚಿಗೂ ಅಧಿಕ ಮಳೆಯಾಗಿದೆ. ಭದ್ರಾ ಹಿನ್ನೀರಿನ ಪ್ರಮಾಣ ಈ ಹಿಂದಿಗಿಂತಲೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Post Comments (+)