ಬುಧವಾರ, ಜೂನ್ 23, 2021
28 °C

ನರಸಿಂಹಸ್ವಾಮಿ ರಥೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ: ಹೋಬಳಿಯ ಬೆಳಗೀಹಳ್ಳಿಯ ಇತಿಹಾಸ ಪ್ರಸಿದ್ಧ ಕಂಬದ ನರಸಿಂಹಸ್ವಾಮಿ ದೇವರ ರಥೋತ್ಸವ ಶನಿವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ರಂಗದ ಹಬ್ಬದ ಕೊನೆಯ ದಿನದಂದು ನಡೆಯುವ ರಥೋತ್ಸವಕ್ಕೆ ದೇವರನ್ನು ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿ, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದೇವರನ್ನು ರಥದ ಬಳಿಗೆ ತರಲಾಯಿತು. ನಂತರ ವಿವಿಧ ಪುಷ್ಪಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಿಸಿದ್ದ ರಥದ ಮೇಲೆ ಸ್ವಾಮಿಯನ್ನು ಕೂರಿಸಲಾಯಿತು. ರಥ ಚಲಿಸುವಾಗ ಭಕ್ತರು ಬಾಳೆ ಹಣ್ಣನ್ನು ರಥಕ್ಕೆ ಎಸೆದು ದೇವರ ನಾಮ ಸ್ಮರಣೆ ಮಾಡಿದರು.  ಗ್ರಾಮದಲ್ಲಿ ಧಾರ್ಮಿಕ ವಿಧಿವಿದಾನಗಳೊಂದಿಗೆ ಈ ಹಬ್ಬವನ್ನು ಒಂದುವಾರ ಆಚರಿಸಲಾಯಿತು. ಪ್ರತಿ ನಿತ್ಯ ರಂಗದ ಕುಣಿತ, ದೇವರ ಮೆರವಣಿಗೆ ಮಾಡಲಾಯಿತು. ರಥೋತ್ಸವದ ನಂತರ ಮಧ್ಯ ರಾತ್ರಿ 12 ಕ್ಕೆ ಮೂಡಲಗಿರಿಯಪ್ಪನ ಹರಿಸೇವೆಯ ಕಾರ್ಯಕ್ರಮ ನಡೆಯಿತು. ರಾತ್ರಿ ರಥೋತ್ಸವದ ನಂತರ ಅನ್ನಸಂತರ್ಪಣೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.