ಮಂಗಳವಾರ, ಮೇ 18, 2021
22 °C

ನರಸೀಪುರ: ಮೆಸ್ಕಾಂ ಎಂಜಿನಿಯರ್‌ಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪ: ತಾಲ್ಲೂಕಿನ ನರಸೀಪುರ ಗ್ರಾಮದ ಕೊಗೆ ಎಂಬಲ್ಲಿ  20 ಮನೆಗಳಿಗೆ 10ದಿನಗಳಿಂದ ವಿದ್ಯುತ್ ಸರಬರಾಜು ಮಾಡದ ಮೆಸ್ಕಾಂ ಕ್ರಮ ವಿರೋಧಿಸಿ ಗ್ರಾಮಸ್ಥರು ಶನಿವಾರ ಗ್ರಾಮಕ್ಕೆ ಬಂದ ಮೆಸ್ಕಾಂ ಎಂಜಿನಿಯರ್ ಶ್ರೀನಿವಾಸ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್ ಅನ್ನು ಖಾಸಗಿ ವ್ಯಕ್ತಿಗಳು ಸ್ಥಗಿತಗೊಳಿಸಿ ಬೇರೆಡೆಗೆ ಸರಬರಾಜು ಮಾಡುತ್ತಿದ್ದರೂ ಮೆಸ್ಕಾಂ ಕ್ರಮ ಕೈಗೊಳ್ಳುತ್ತಿಲ್ಲ. ಗ್ರಾಮದಲ್ಲಿ ಲೈನ್‌ಮನ್ ಇಲ್ಲ. ದೂರವಾಣಿ  ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದರು. ಮೆಸ್ಕಾಂ ಹರಿಹರಪುರ ಕೇಂದ್ರದಲ್ಲಿ 18 ಜನ ಲೈನ್‌ಮನ್  ಬದಲಿಗೆ 6ಜನ ಮಾತ್ರ ಕರ್ತವ್ಯದಲ್ಲಿದ್ದಾರೆ. ನಾರ್ವೆಯಿಂದ ಮರಿತೊಟ್ಲುವರೆಗೆ  ಹೊಸ ವಿದ್ಯುತ್ ಮಾರ್ಗ ಅಳವಡಿಸಿ ದೋಷ ಸರಿಪಡಿಸುವುದಾಗಿ ಎಂಜಿನಿಯರ್ ಶ್ರೀನಿವಾಸ್ ಹೇಳಿದರು. ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಪಳನಿ ಮಾತನಾಡಿ, ಗ್ರಾಮಸ್ಥರ ಕರೆಗೆ ಸ್ಪಂದಿಸುವಂತೆ ಸೂಚಿಸಿದರಲ್ಲದೆ ಮೆಸ್ಕಾಂ ಸಿಬ್ಬಂದಿ ಕೊರತೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಓಣಿತೋಟ ರತ್ನಾಕರ್, ನಾರ್ವೆ ಅಶೋಕ್, ತಾ.ಪಂ.ಮಾಜಿ ಸದಸ್ಯ ಕಾಗಲಗೋಡು ಚಂದ್ರಶೇಖರ್. ಕೆ.ಎಸ್. ಕಾಡಪ್ಪ ಗೌಡ, ಇಸ್ಮಾಯಿಲ್, ಸಾದಿಕ್, ಎಚ್.ಪಿ.ಶಿವಪ್ಪ, ಹೊಂಡದಮನೆ ಉಮೇಶ್, ಕೊಗೆ ವಿಜಯೇಂದ್ರ, ಮಂಜುನಾಥ್, ಸುರೇಶ್, ವೆಂಕಟೇಶ್,ಸುಬ್ಬಣ್ಣ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.