ನರಹಂತಕ ಆನೆ ಮತ್ತೆ ಪ್ರತ್ಯಕ್ಷ!

7

ನರಹಂತಕ ಆನೆ ಮತ್ತೆ ಪ್ರತ್ಯಕ್ಷ!

Published:
Updated:

ಶಿವಮೊಗ್ಗ: ಸಾಗರದ ಆವಿನಹಳ್ಳಿಯಲ್ಲಿ ಈ ಹಿಂದೆ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ನರಹಂತಕ ಆನೆಯೊಂದು ಮತ್ತೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯ ಕಾರಿಹಕ್ಲು ಕಾಡಿನ ಅಂಚಿನಲ್ಲಿ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.ಭಾನುವಾರ ಬೆಳಿಗ್ಗೆ ನಕ್ಸಲ್ ನಿಗ್ರಹದಳದವರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಆನೆ ಪ್ರತ್ಯಕ್ಷವಾಗಿದೆ. ನಿಗ್ರಹದಳದ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಆಗುಂಬೆ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬಂದಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.ಇದೇ ಆನೆ ಹೊಸನಗರ ಮಾಸ್ತಿಕಟ್ಟೆ ಹಾಗೂ ನಗರ ಗ್ರಾಮಗಳಲ್ಲೂ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry