ನರೇಂದ್ರ ಮೋದಿ 'ಪ್ರಧಾನಿ ಅಭ್ಯರ್ಥಿ': ಬಿಜೆಪಿ ಅಧಿಕೃತ ಘೋಷಣೆ

7

ನರೇಂದ್ರ ಮೋದಿ 'ಪ್ರಧಾನಿ ಅಭ್ಯರ್ಥಿ': ಬಿಜೆಪಿ ಅಧಿಕೃತ ಘೋಷಣೆ

Published:
Updated:

ನವದೆಹಲಿ (ಐಎಎನ್ಎಸ್, ಪಿಟಿಐ): ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದೀಯ ಮಂಡಳಿಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 2014ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.ಪಕ್ಷದ  ಉನ್ನತ ನಿರ್ಣಯ ಸಮಿತಿಯಲ್ಲಿ ಒಂದಾದ ಬಿಜೆಪಿ ಸಂಸದೀಯ ಮಂಡಳಿಯ ಸಭೆಯ ಬಳಿಕ ನರೇಂದ್ರ ಮೋದಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ನಿರ್ಧಾರವನ್ನು ಪ್ರಕಟಿಸಲಾಯಿತು.ಈ ಪ್ರಕಟಣೆಗೆ ಮುನ್ನ ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಅವರು ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಪಕ್ಷ ಎಲ್ಲ ನಾಯಕರ ಜೊತೆಗೆ ಬಿರುಸಿನ ಸಮಾಲೋಚನೆ ನಡೆಸಿದ್ದರು.62ರ ಹರೆಯದ ಮೋದಿ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ರಚಿಸಲಾದ ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.

ಪಕ್ಷದ ಸಂಪ್ರದಾಯದಂತೆ ಬಿಜೆಪಿ ಸಂಸದೀಯ ಮಂಡಳಿಯು ಮೋದಿ ಅವರನ್ನು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎಂದು ರಾಜನಾಥ ಸಿಂಗ್ ಮಂಡಳಿ ಸಭೆಯ ಬಳಿಕ ಹೇಳಿದರು.'ಈ ಅವಕಾಶ ನೀಡುತ್ತಿರುವುದಕ್ಕಾಗಿ ನಾನು ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಸಲ್ಲಿಸುವೆ' ಎಂದು ಈ ಸಂದರ್ಭದಲ್ಲಿ ಮೋದಿ ನುಡಿದರು.ಮೋದಿ ಅವರು ಎಲ್.ಕೆ. ಅಡ್ವಾಣಿ ಅವರ ಆಶೀರ್ವಾದ ಪಡೆಯುವ ಸಲುವಾಗಿ ಹಿರಿಯ ನಾಯಕನ ಭೇಟಿ ಮಾಡಲಿದ್ದಾರೆ ಎಂದು ರಾಜನಾಥ ಸಿಂಗ್ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry