ನರ್ಸಿಂಗ್ ಶಾಲೆ ಪ್ರವೇಶಕ್ಕೆ ಕೌನ್ಸೆಲಿಂಗ್

ಶನಿವಾರ, ಜೂಲೈ 20, 2019
27 °C

ನರ್ಸಿಂಗ್ ಶಾಲೆ ಪ್ರವೇಶಕ್ಕೆ ಕೌನ್ಸೆಲಿಂಗ್

Published:
Updated:

ಬೆಂಗಳೂರು:  ರಾಜ್ಯಾದ್ಯಾಂತ ಇರುವ 12 ಸರ್ಕಾರಿ ನರ್ಸಿಂಗ್ ಶಾಲೆ ಮತ್ತು ಖಾಸಗಿ ನರ್ಸಿಂಗ್ ಶಾಲೆಗಳ ಡಿಪ್ಲೊಮಾ ನರ್ಸಿಂಗ್ ಪ್ರವೇಶವನ್ನು ಮೊದಲಬಾರಿಗೆ ಕೇಂದ್ರೀಕೃತ ಕೌನ್ಸೆಲಿಂಗ್‌ನ ಮೂಲಕ ನೀಡುವುದಕ್ಕೆ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.ಖಾಸಗಿ ಶಿಕ್ಷಣ ಸಂಸ್ಥೆಗಳ ಶೇ 10 ರಷ್ಟು ಸೀಟುಗಳನ್ನು ಸರ್ಕಾರಿ ಖೋಟಾದಡಿಯಲ್ಲಿ ಮೆರಿಟ್ ವಿದ್ಯಾರ್ಥಿಗಳಿಗೆ ಸರ್ಕಾರಿ ದರದಲ್ಲಿ ನೀಡುವುದು ಕಾನೂನಿನಲ್ಲಿರುವಂತೆ ಅನಿವಾರ್ಯವಾಗಿದೆ.ರಾಜ್ಯದಲ್ಲಿರುವ 412 ವಿದ್ಯಾ ಸಂಸ್ಥೆಗಳಲ್ಲಿ ಇರುವ ನರ್ಸಿಂಗ್ ಡಿಪ್ಲೊಮಾ ಸೀಟುಗಳಲ್ಲಿ 2,260 ಸೀಟುಗಳನ್ನು ಸರ್ಕಾರಿ ಖೋಟಾದಡಿ ತುಂಬುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 3,500 ಕ್ಕೂ ಹೆಚ್ಚು ಮಕ್ಕಳು ನೇರವಾಗಿ ಎಸ್ಸೆಸ್ಸೆಲ್ಸಿ ಮೆರಿಟ್ ಆಧಾರದ ಮೇಲೆ ಕೌನ್ಸಿಲಿಂಗ್‌ನಲ್ಲಿ ಸಿಇಟಿ ಮಾದರಿಯಲ್ಲಿ ಸೀಟುಗಳನ್ನು ಪಡೆಯಲು ಆರಂಭ ನೀಡಲಾಯಿತು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನರ್ಸಿಂಗ್ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನೀಡುವ ಶುಲ್ಕವನ್ನು ಮರುಪಾವತಿ ಮಾಡುವ ಕ್ರಮಕ್ಕೆ ಚಾಲನೆ ನೀಡಲಾಯಿತು.ಬಹಳಷ್ಟು ಖಾಸಗಿ ಸಂಸ್ಥೆಗಳಲ್ಲಿ ಸರ್ಕಾರಿ ಖೋಟಾದಡಿಯಲ್ಲಿ ಬಂದ ವಿದ್ಯಾರ್ಥಿಗಳಿಂದ  40,000 ರಿಂದ 50,000 ರೂಪಾಯಿಗಳ ಪ್ರವೇಶ ಶುಲ್ಕವನ್ನು ಪಡೆಯುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ದಿಸೆಯಲ್ಲಿ ಕೌನ್ಸೆಲಿಂಗ್‌ನಿಂದ ಸೀಟು ಪಡೆದ ಎಲ್ಲ ಮಕ್ಕಳಿಂದ 4,500 ರೂಪಾಯಿಗಳನ್ನು ಪ್ರವೇಶ ಶುಲ್ಕವಾಗಿ ಪಡೆದು ನೇರವಾಗಿ ಪ್ರವೇಶ ಪತ್ರವನ್ನು ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.`ಈ ಸಾಲಿನಿಂದಲೇ ಬಿ.ಎಸ್ಸಿ ನರ್ಸಿಂಗ್ ಉತ್ತೀರ್ಣರಾದವರಿಗೆ 1 ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡುವ ಪದ್ಧತಿಯನ್ನು ಆಗಸ್ಟ್‌ನಿಂದ ಜಾರಿಗೆ ತರಲಾಗುವುದು. ಈ ಸಂದರ್ಭದಲ್ಲಿ ನರ್ಸ್‌ಗಳಿಗೆ 14,900 ರೂಪಾಯಿ ತಿಂಗಳ ಗೌರವ ಧನವನ್ನು ನೀಡಲಾಗುವುದು. ಪಠ್ಯ ಕ್ರಮಾಂಕದಂತೆ ಕೊನೆಯ ವರ್ಷದ ಗ್ರಾಮೀಣ ಆಸ್ಪತ್ರೆಗಳಲ್ಲಿನ ಸೇವೆಯನ್ನು ಕಡ್ಡಾಯ ಮಾಡುವ ಕಾನೂನನ್ನು ಜಾರಿಗೆ ತರಲಾಗುವುದು~ ಎಂದು ರಾಮದಾಸ್  ಹೇಳಿದರು.`ನರ್ಸಿಂಗ್ ಪಠ್ಯಕ್ರಮದಲ್ಲಿ ಹೊಸ ಹೊಸ ವಿಷಯಗಳನ್ನು ಸೇರಿಸಲಾಗುವುದು. ವ್ಯಾವಹಾರಿಕ ಇಂಗ್ಲಿಷ್ ಕಲಿಕೆಯನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry