ನಲ್ಲಿಗಳಿಗೆ ಮೀಟರ್ ಕಡ್ಡಾಯ

7

ನಲ್ಲಿಗಳಿಗೆ ಮೀಟರ್ ಕಡ್ಡಾಯ

Published:
Updated:

ವಿಜಾಪುರ: ನಗರದಲ್ಲಿ ಇನ್ನು ಮುಂದೆ ಕುಡಿಯುವ ನೀರು ಸರಬರಾಜಿಗೆ ಮೀಟರ್ ಅಳವಡಿಸಲು ಜಲ ಮಂಡಳಿ ಮುಂದಾಗಿದೆ. ಮೀಟರ್ ಅಳವಡಿಕೆಗೆ ಸಾರ್ವಜನಿಕರಿಗೆ ವಿನಾಯ್ತಿ ನೀಡಲಾಗಿದ್ದು, ನಗರದಲ್ಲಿರುವ ವಾಣಿಜ್ಯ ಬಳಕೆದಾರರು ಜನವರಿ 31ರೊಳಗಾಗಿ ಕಡ್ಡಾಯವಾಗಿ ನಲ್ಲಿಗಳಿಗೆ ಮೀಟರ್ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂಥವರ ಹೋಟೆಲ್, ಆಸ್ಪತ್ರೆ ಮುಂತಾದ ವಾಣಿಜ್ಯ ಬಳಕೆದಾರರ ನಲ್ಲಿಗಳನ್ನು ಕಡಿತಗೊಳಿಸಲಾಗುವುದು ಎಂದು ಜಲ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನಮೂರ್ತಿ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿ 2010-11ನೇ ಸಾಲಿನ ಕುಡಿಯುವ ನೀರು ಪೂರೈಕೆ  ಬಿಲ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದ್ದು, ಗ್ರಾಹಕರು ಬಿಲ್ ನೀಡಲು ಬರುವ ಸಿಬ್ಬಂದಿಯೊಂದಿಗೆ ತರಕಾರು ಮಾಡದೇ ಬಿಲ್ ಪಡೆಯಬೇಕು. ಬಿಲ್‌ನಲ್ಲಿ ಯಾವುದಾದರೂ ನ್ಯೂನತೆಯಿದ್ದಲ್ಲಿ ಜಲ ಮಂಡಳಿ ಕಚೇರಿಗೆ ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.ನೀರು ಅತ್ಯಮೂಲ್ಯ; ಇನ್ನು ಮುಂದೆ ಗ್ರಾಹಕರು ತಮ್ಮ ತಮ್ಮ ಮನೆಯ ಮುಂದಿನ ನಲ್ಲಿಗಳಿಗೆ ಬಾಲ್‌ವಾಲ್ವ್ ಅಳವಡಿಸಬೇಕು. ನೀರು ಸಂಗ್ರಹ ಪೂರ್ಣಗೊಂಡ ನಂತರ ಶೌಚಾಲಯ, ಚರಂಡಿಗೆ ನೀರು ಹರಿಬಿಡದೇ ಬಂದ್ ಮಾಡಬೇಕು. ನೀರು ಪೂರೈಕೆಯ ಮುಖ್ಯ ಕೊಳವೆಯಿಂದ ಅನುಮತಿ ಇಲ್ಲದೇ ಸಂಪರ್ಕ ಜೋಡಣೆ ಮಾಡುತ್ತಿದ್ದಲ್ಲಿ ದೂ: 08352- 224500ಗೆ ಕರೆ ತಿಳಿಸುವಂತೆ ಪ್ರಸನ್ನಮೂರ್ತಿ ತಿಳಿಸಿದ್ದಾರೆ.ನಗರದಲ್ಲಿದ್ದ ಸಾವಿರಾರು 24 ಗಂಟೆ ನೀರು ಪೂರೈಕೆಯ ಅನಧಿಕೃತ ನಳಗಳನ್ನು ಕಡಿತಗೊಳಿಸಲಾಗಿದೆ. ನಗರದಲ್ಲಿ 24 ಗಂಟೆಯ ನಳ ಕಂಡು ಬಂದಲ್ಲಿ ಜಲ ಮಂಡಳಿಗೆ ತಿಳಿಸಬೇಕು. ಗ್ರಾಹಕರು ಕುಡಿಯುವ ನೀರಿನ ಬಿಲ್‌ನ್ನು ತಪ್ಪದೇ ಪಾವತಿ ಮಾಡುವ ಮೂಲಕ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.ಇನ್ನು ನಗರದಲ್ಲಿ ಕುಡಿಯುವ ನೀರನ್ನು ವಾಣಿಜ್ಯ ಬಳಕೆಯ ಗ್ರಾಹಕರು ಇದೇ ಜ. 31ರೊಳಗೆ ನಲ್ಲಿಗೆ ಕಂಪನಿಯ ಮೀಟರ್ ಅಳವಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ನೀರು ಪೂರೈಕೆ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೂರ್ತಿ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry