ನವಜಾತ ಶಿಶು ಅಪಹರಣ
ಹೊಸಕೋಟೆ: ಮಗುವಿಗೆ ಲಸಿಕೆ ಹಾಕುವ ನೆಪದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿದ್ದ ನವಜಾತ ಶಿಶುವೊಂದನ್ನು ಅಪರಿಚಿತ ಮಹಿಳೆಯೊಬ್ಬಳು ಅಪಹರಿಸಿದ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಮಲಿಯಪ್ಪನಹಳ್ಳಿಯ ಅಂಬರೀಷ್ ಅವರ ಪತ್ನಿ ನಳಿನಿ ಎಂಬಾಕೆ ಹೆರಿಗೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮಧ್ಯಾಹ್ನ ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದರು. ನಳಿನಿಯ ಅತ್ತೆ ಮುನಿಯಮ್ಮ ಹಾಗೂ ಗ್ರಾಮದ ಆಶಾ ಕಾರ್ಯಕರ್ತೆ ವಿಜಯಾ ಎಂಬುವವರು ಜೊತೆಯಲ್ಲಿದ್ದರು. ಹೆರಿಗೆಯಾದ ಒಂದು ಗಂಟೆ ನಂತರ ಅಲ್ಲಿಗೆ ಬಂದ ಮಹಿಳೆಯೊಬ್ಬರು, ತಾನು ಆಸ್ಪತ್ರೆಯಲ್ಲಿನ ನರ್ಸ್ ಎಂದು ಹೇಳಿಕೊಂಡು ಬಿಸಿಜಿ ಲಸಿಕೆ ಹಾಕುವ ನೆಪದಲ್ಲಿ ಮಗುವನ್ನು ಕೊಂಡೊಯ್ದಳು.
ಆದರೆ, ಎಷ್ಟೊತ್ತಾದರೂ ಆಕೆ ಮಗುವನ್ನು ವಾಪಸು ಕರೆ ತರದಿದ್ದರಿಂದ ಅನುಮಾನಗೊಂಡು ಹುಡುಕಾಡಿದಾಗ ಅಪರಿಚಿತ ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿರುವುದು ಕಂಡು ಬಂತು. ನಳಿನಿಯ ಭಾವ ಲೋಕೇಶ ಎಂಬುವವರು ಗುರುವಾರ ಕೊಟ್ಟ ದೂರಿನ ಮೇರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.