ಗುರುವಾರ , ಏಪ್ರಿಲ್ 15, 2021
20 °C

ನವಜಾತ ಶಿಶು ಮೇಲೆ ಇಲಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ರಾವಲ್ಪಿಂಡಿಯ `ದಿ ಹೋಲಿ ಫ್ಯಾಮಿಲಿ ಆಸ್ಪತ್ರೆ'ಯ ಸ್ತ್ರೀರೋಗ ವಿಭಾಗದಲ್ಲಿ ನವಜಾತ ಶಿಶುವಿನ ಮೇಲೆ ಇಲಿ ದಾಳಿ ಮಾಡಿದ ಪ್ರಕರಣ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಇಲಿಯು ಮಗುವಿನ ತುಟಿ, ಕೆನ್ನೆ, ಮೂಗು ಹಾಗೂ ಉಗುರುಗಳನ್ನು ಕಚ್ಚಿ ತೀವ್ರ ಗಾಯಗೊಳಿಸಿದೆ.

`ರಾವಲ್ಪಿಂಡಿಯಂಥ ನಗರದಲ್ಲಿಯೇ ಇಂಥ ಪರಿಸ್ಥಿತಿ ಇದ್ದರೆ, ಇನ್ನು ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಕೇಂದ್ರಗಳು ಯಾವ ಮಟ್ಟದಲ್ಲಿ ಇರಬಹುದು' ಎಂದು ` ದಿ ಡಾನ್' ಪತ್ರಿಕೆ ವರದಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ರಚಿಸಲಾಗಿದ್ದು, ಆಸ್ಪತ್ರೆಯ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.