ನವಜಾತ ಹೆಣ್ಣುಶಿಶು ಕೊಂದ ಅಜ್ಜಿ

7

ನವಜಾತ ಹೆಣ್ಣುಶಿಶು ಕೊಂದ ಅಜ್ಜಿ

Published:
Updated:

ಸಿಂದಗಿ: ನವಜಾತ ಹೆಣ್ಣುಶಿಶುವಿಗೆ ಸ್ವತಃ  ಅಜ್ಜಿಯೇ ವಿಷ ಕುಡಿಸಿ ಕೊಂದ ಘಟನೆ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ತಾಂಡಾದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ರುಕ್ಮಾಬಾಯಿ ಅರ್ಜುನ ಪವಾರ ಎಂಬ ಮಹಿಳೆಗೆ ಈಗಾಗಲೇ ನಾಲ್ವರು ಹೆಣ್ಣುಮಕ್ಕಳಿದ್ದು, ಐದನೇಯದೂ ಹೆಣ್ಣುಶಿಶುವಾಗಿತ್ತು. ತನ್ನ ಮಗಳಿಗೆ ಈ ಎಲ್ಲ ಮಕ್ಕಳನ್ನು ಸಾಕಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರುಕ್ಮಾಬಾಯಿ ಅವರ ತಾಯಿ ಗಂಗಾಬಾಯಿ ತೊಗರಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಮಗುವಿಗೆ ಕುಡಿಸಿ ಸಾಯಿಸಿದ್ದಾರೆ.

ತನ್ನ ಹತ್ತಿರ ಮಲಗಿದ್ದ ಕೂಸನ್ನು ಬುಧವಾರ ಸಂಜೆ ರತ್ನಾಬಾಯಿ ಹಾಗೂ ತನ್ನ ತಾಯಿ ತೆಗೆದುಕೊಂಡು ಹೋಗಿದ್ದರು ಎಂದು ರುಕ್ಮಾಬಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಗಾಂವಿ ತಾಂಡಾದ ಗಂಗಾಬಾಯಿ ರಾಠೋಡ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಸಿಂದಗಿ ಠಾಣೆ ಪಿಎಸ್‌ಐ ರಮೇಶ ರೊಟ್ಟಿ ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry