ಸೋಮವಾರ, ನವೆಂಬರ್ 18, 2019
28 °C

ನವದೀಪನ ಸಿನಿಯಾನ

Published:
Updated:

`ಬಾದ್‌ಶಾ' ಸಿನಿಮಾದಲ್ಲಿ ನಟಿಸಿದ್ದ ತೆಲುಗು ನಟ ನವ್‌ದೀಪ್ ಪಲ್ಲಪೋಲು ಕೈಲೀಗ ಬರೋಬ್ಬರಿ ಆರು ಚಿತ್ರಗಳಿವೆಯಂತೆ.`ಚಂದಮಾಮ', `ಆರ್ಯ 2' ಚಿತ್ರಗಳು ನವದೀಪ್ ಚಿತ್ರಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದವು. ಅಲ್ಲಿಂದ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ನವದೀಪ್‌ಗೆ ಈಗ ಒಂದರ ಹಿಂದೆ ಒಂದರಂತೆ ಅವಕಾಶಗಳು ಬರುತ್ತಿವೆ. ಈಗ ಅವರು ನಟಿಸಿರುವ ಮೂರು ಚಿತ್ರಗಳು ಬಿಡುಗಡೆಗೆ ಕಾಯುತ್ತಿದ್ದರೆ, ಇನ್ನು ಮೂರು ಚಿತ್ರಗಳು ಪ್ರಾರಂಭದ ಹಂತದಲ್ಲಿವೆ.

 

“ನನ್ನ ಕೈಯಲ್ಲೆಗ ಆರು ಚಿತ್ರಗಳಿವೆ. `ವಸೂಲ್‌ರಾಜಾ', ಬಂಗಾರುಕೋಡಿಪೆಟ್ಟಾ' ಮತ್ತು `ಪೋಗಾ' ಚಿತ್ರಗಳು ಇನ್ನೇನು ತೆರೆಕಾಣಲಿವೆ. ಇನ್ನು ಮೂರು ಚಿತ್ರಗಳ ಚಿತ್ರೀಕರಣ ಈ ತಿಂಗಳ ಅಂತ್ಯದಿಂದ ಶುರುವಾಗಲಿದೆ. ಚಿತ್ರ ನಿರ್ಮಾಪಕರು ನನ್ನ ಮೇಲಿಟ್ಟಿರುವ ನಂಬಿಕೆಗೆ ಚಿರ ಋಣಿ” ಎಂದು ನವದೀಪ್ ಟ್ವಿಟ್ ಮಾಡಿದ್ದಾರೆ.ಅಂದಹಾಗೆ, ಜೂನಿಯರ್ ಎನ್‌ಟಿಆರ್ ಅಭಿನಯದ `ಬಾದ್‌ಶಾ' ಚಿತ್ರದಲ್ಲಿ ನವ್‌ದೀಪ್ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಖಳ ಛಾಯೆಯುಳ್ಳ ಪಾತ್ರವೊಂದರಲ್ಲಿ ನವದೀಪ್ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಂತೆ. 

 

ಪ್ರತಿಕ್ರಿಯಿಸಿ (+)