ನವದೆಹಲಿ ಕಾರು ಸ್ಫೋಟ: ಅಂತರರಾಷ್ಟ್ರೀಯ ಕರೆಗಳ ಪರಿಶೀಲನೆ

7

ನವದೆಹಲಿ ಕಾರು ಸ್ಫೋಟ: ಅಂತರರಾಷ್ಟ್ರೀಯ ಕರೆಗಳ ಪರಿಶೀಲನೆ

Published:
Updated:

ನವದೆಹಲಿ, (ಪಿಟಿಐ): ಇಸ್ರೇಲ್ ರಾಯಭಾರಿ ಕಚೇರಿಗೆ ಸೇರಿದ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು  ತನಿಖೆಯನ್ನು ತೀವ್ರಗೊಳಿಸಿದ್ದು, ದೆಹಲಿಯಿಂದ ಮಾಡಿದ ಅಂತರರಾಷ್ಟ್ರೀಯ ಕರೆಗಳ  ಪರಿಶೀಲನೆ ಕೈಗೊಂಡಿದ್ದಾರೆ.ಇಸ್ರೇಲ್ ರಾಯಭಾರಿ ಕಚೇರಿಗೆ ಸಂಬಂಧಿಸಿದ ಕಾರು ಸೋಮವಾರ ಸ್ಫೋಟಗೊಂಡ ಸಮಯದಲ್ಲಿ  ಇರಾನ್ ಸೇರಿದಂತೆ ಪಾಕಿಸ್ತಾನ ಮತ್ತು ಮಧ್ಯ ಪ್ರಾಚ್ಯರಾಷ್ಟ್ರಗಳಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕರೆಗಳನ್ನು ತನಿಖಾಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.`ಸ್ಫೋಟ ನಡೆದ ಹಿಂದಿನ ಐದು ದಿನಗಳ ಅವಧಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ನವದೆಹಲಿಯಿಂದ ಯಾವುದಾದರೂ ಅಂತರಾಷ್ಟ್ರೀಯ ಕರೆಗಳನ್ನು ಮಾಡಲಾಗಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತದೆ.ಅಲ್ಲದೇ ವಿಶೇಷವಾಗಿ ಇಲ್ಲಿನ ಖಾನ್ ಮಾರ್ಕೆಟ್ ಪ್ರದೇಶದಿಂದ ಇರಾನ್, ಲೆಬನಾನ್ ಮತ್ತು ಪಾಕಿಸ್ತಾನ ರಾಷ್ಟ್ರಗಳಿಗೆ ಕೆಲವು ಅಂತರರಾಷ್ಟ್ರೀಯ ಕರೆಗಳು ಹೋಗಿವೆ. ಇವುಗಳ ಪರಿಶೀಲನೆಯನ್ನು ಕೂಡ ನಡೆಸಲಾಗುವುದು~ ಎಂದು  ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಅಂತರರಾಷ್ಟ್ರೀಯ ಕರೆಗಳ ಪರಿಶೀಲನೆ ಕೈಗೊಳ್ಳುವ ಮೂಲಕ ತನಿಖೆಯನ್ನು ತೀವ್ರಗೊಳಿಸಲಾಗಿದೆ~ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಇಸ್ರೇಲ್ ರಾಯಭಾರಿ ಕಚೇರಿಗೆ ಸಂಬಂಧಿಸಿದ ಕಾರನ್ನು ಸೋಮವಾರ ದ್ವಿಚಕ್ರವಾಹನದ ಸಹಾಯದಿಂದ ಸ್ಫೋಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry