ಗುರುವಾರ , ಜುಲೈ 29, 2021
26 °C

ನವರಸದಲ್ಲಿ ರಾಮಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವರಸದಲ್ಲಿ ರಾಮಾಯಣ

ಬೆಂ.ವಿ.ವಿ.ದ ಪ್ರದರ್ಶನ ನೃತ್ಯ ಕಲಾವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷಾ ಪ್ರಯೋಗಾರ್ಥವಾಗಿ ‘ನವರಸ ರಾಮಾಯಣ’ ಕಿರಣಗಳು ಎಂಬ ನೃತ್ಯನಾಟಕವನ್ನು ವಿಭಿನ್ನ ಶೈಲಿಯ ಕಥಾನಕದ ಸಂಚಾರಿಗಳಲ್ಲಿ ಪ್ರದರ್ಶಿಸಿದರು.ಒಬ್ಬೊಬ್ಬರು ಒಂದೊಂದು ರಸವನ್ನು ರಾಮಾಯಣದ ಸನ್ನಿವೇಶಗಳಲ್ಲಿ ಆಯ್ದುಕೊಂಡು ಪಾತ್ರಗಳಿಗೆ ಜೀವಂತಿಕೆ ತುಂಬಿ ಭಾವಾಭಿನಯಕ್ಕೆ ಒತ್ತು ನೀಡಿದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಕೂಡ ನೃತ್ಯನಾಟಕವನ್ನು ಕೆಲವೇ ವೇಷಭೂಷಣಗಳನ್ನು ಬಳಸಿಯೂ ಮಾಡಬಹುದು ಎಂಬುದನ್ನು ನಿರೂಪಿಸಿದರು.ನವರಸಗಳನ್ನು ಪುಷ್ಪಾಂಜಲಿಯಲ್ಲಿಯೇ ಅನಾವರಣಗೊಳಿಸುವ ಪ್ರಥಮ ಪ್ರಯೋಗವೂ ನಡೆಯಿತು. ಗುರುಗಳ ದಕ್ಷ ಶಿಕ್ಷಣ, ವಿದ್ಯಾರ್ಥಿನಿಯರ ನೃತ್ಯಸಂಯೋಜನೆಯ ಪ್ರತಿಭೆ ಪ್ರತಿಫಲಿಸಿ ನೃತ್ಯ ನಾಟಕದ ರಸಸಂಜೆಯನ್ನು ಸ್ಮರಣೀಯವಾಗಿಸಿತು.ಹಿನ್ನೆಲೆಯಲ್ಲಿ ಪ್ರಸನ್ನಕುಮಾರ್ (ನಟುವಾಂಗ), ವಸುಧಾ ಬಾಲಕೃಷ್ಣ (ಹಾಡುಗಾರಿಕೆ), ಬಾಲಕೃಷ್ಣ (ಮೃದಂಗ), ಕಾರ್ತಿಕ್ ದಾತಾರ್ (ರಿದಂ ಪ್ಯಾಡ್), ವಿವೇಕ್ ಕೃಷ್ಣ (ಕೊಳಲು), ನಾಗರಾಜು (ಬೆಳಕು), ದೀಪು ಕೇರಳ (ಪ್ರಸಾದನ), ವಿದುಷಿ ದ್ವಾರಕಿ ಕೃಷ್ಣಸ್ವಾಮಿ (ಸಾಹಿತ್ಯ ಸಂಗೀತ), ಜಸ್ವಾ (ಜಸ್ವಾ) ಸಹಕರಿಸಿದರು.ಕುಲಪತಿ ಡಾ. ಎನ್. ಪ್ರಭುದೇವ್ ದಂಪತಿ, ನೃತ್ಯಗುರು ಶಾರದಾರುದ್ರ ನೃತ್ಯನಾಟಕ ವೀಕ್ಷಿಸಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.