ನವರಸಪುರ ಉತ್ಸವಕ್ಕೆ ರೂ. 56 ಲಕ್ಷ ಖರ್ಚು

ಶುಕ್ರವಾರ, ಜೂಲೈ 19, 2019
26 °C

ನವರಸಪುರ ಉತ್ಸವಕ್ಕೆ ರೂ. 56 ಲಕ್ಷ ಖರ್ಚು

Published:
Updated:

ವಿಜಾಪುರ: ಮೇ ತಿಂಗಳಲ್ಲಿ ನಡೆದ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ನವರಸಪುರ ಉತ್ಸಕ್ಕೆ ಒಟ್ಟಾರೆ 56.53 ಲಕ್ಷ ರೂಪಾಯಿ ಖರ್ಚಾಗಿದೆ. ಉತ್ಸವ ಆಚರಿಸಿದ ನಂತರ 48.38 ಲಕ್ಷ ರೂಪಾಯಿ ಹಣ ಉಳಿಸಲಾಗಿದ್ದು, ನವರಸಪುರ ಉತ್ಸವದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟೊಂದು ಹಣವನ್ನು ಮುಂದಿನ ಉತ್ಸವಕ್ಕಾಗಿ ಉಳಿಸಿಕೊಳ್ಳಲಾಗಿದೆ.ಉತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಉತ್ಸವದ ಖರ್ಚು-ವೆಚ್ಚವನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದ್ದಾರೆ.2011ರ ಮೇ 20ರಿಂದ 22ರ ವರೆಗೆ ಜರುಗಿದ ನವರಸಪುರ ಉತ್ಸವಕ್ಕೆ 1.04 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಈ ಪೈಕಿ ರೂ. 56.53 ಲಕ್ಷ ಖರ್ಚಾಗಿದೆ. ರೂ. 48.38 ಲಕ್ಷಗಳನ್ನು ಮುಂದಿನ ನವರಸಪುರ ಉತ್ಸವಕ್ಕಾಗಿ ಉಳಿತಾಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ನವರಸಪುರ ಉತ್ಸವಕ್ಕಾಗಿ ಹಿಂದಿನ ಹಣ (ಆರಂಭಿಕ ಶುಲ್ಕ) ರೂ.29.90 ಲಕ್ಷ ಇತ್ತು.  2011ರ ನವರಸಪುರ ಉತ್ಸವ ಆಚರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ರೂ.50 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ರೂ. 3 ಲಕ್ಷ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳು, ನಗರಸಭೆ, ಪುರಸಭೆಗಳಿಂದ ರೂ. 4 ಲಕ್ಷ, ಖಾಸಗಿ ಸಂಸ್ಥೆಗಳು ಮತ್ತು ದಾನಿಗಳಿಂದ ರೂ.18.01 ಲಕ್ಷ ಹೀಗೆ ಒಟ್ಟಾರೆ ರೂ. 1.04 ಕೋಟಿ ಸಂಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ.

ಸಂಗ್ರಹವಾದ ಹಣದಲ್ಲಿ ನವರಸಪುರ ಉತ್ಸವದ ವಿವಿಧ ಸಮಿತಿಗಳು ಖರ್ಚು ಮಾಡಿರುವ ಹಣದ ವಿವರ:ಕವ್ವಾಲಿ ಸಮಿತಿ: ರೂ. 2,51,824

ಸಾಂಸ್ಕೃತಿಕ ಸಮಿತಿ: ರೂ.16,31,099.,

ವೇದಿಕೆ ನಿರ್ಮಾಣ ಸಮಿತಿ:   ರೂ.13,61,297.,

ಚಿತ್ರಕಲಾ ಸಮಿತಿ: ರೂ.2,54,592.,

ಕವಿಗೋಷ್ಠಿ ಸಮಿತಿ: ರೂ.1,51,624.,

ಮ್ಯಾರಾಥಾನ್ ಹಾಗೂ ಜ್ಯೋತಿ ಮೆರವಣಿಗೆ ಸಮಿತಿ: ರೂ.  3,24,750.,

ಕುಸ್ತಿ ಸಮಿತಿ: ರೂ.3 ಲಕ್ಷ.,

ಮುಶಾಯಿರಾ ಸಮಿತಿ: ರೂ.2,44,309.,

ವಿಚಾರಗೋಷ್ಠಿ ಸಮಿತಿ: ರೂ.18,052,

ಪ್ರಚಾರ ಸಮಿತಿ: ರೂ.5.30,990.,

ಆಹಾರ ಸಮಿತಿ: ರೂ.3,84,794.,

ಸ್ಮರಣ ಸಂಚಿಕೆಗಾಗಿ: ರೂ.2 ಲಕ್ಷ.

ಹೀಗೆ ಒಟ್ಟಾರೆ ರೂ.56,53,331 ಖರ್ಚಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry