ಸೋಮವಾರ, ಏಪ್ರಿಲ್ 19, 2021
31 °C

ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ

ವಾಡಿ: ವಿಜಯದಶಮಿ ದಿನದಂದು ಪಟ್ಟಣದ ರೈಲ್ವೆ ಕಾಲೊನಿ ಗಣೇಶ ಹಾಲ್‌ನಲ್ಲಿ ಪ್ರತಿಷ್ಠಾಪಿಸಿದ ದೇವಿ ದರ್ಶನ ಪಡೆದು, ಪ್ರತಿಯೊಬ್ಬರು ಬನ್ನಿ ಕೊಡುವ ಮೂಲಕ ಪರಸ್ಪರ ಸಿಹಿ ಹಂಚಿ ಶುಭಾಶಯ ಕೋರುವ ಮೂಲಕ ನವರಾತ್ರಿ ಉತ್ಸವಕ್ಕೆ ತೆರೆ ಬಿತ್ತು.



ಪಟ್ಟಣದ ರೈಲ್ವೆ ಕಾಲೊನಿ, ಮರಾಠಿ ಗಲ್ಲಿ ಹಾಗೂ ಎಸಿಸಿ ಕಾಲೋನಿಯಲ್ಲಿ ನಾಡಹಬ್ಬ ನವರಾತ್ರಿ ನಿಮಿತ್ಯ ಪ್ರತಿಷ್ಠಾಪಿಸಿದ ದೇವಿ ಮೂರ್ತಿಗೆ ಒಂಬತ್ತು ದಿನಗಳವರೆಗೆ ವಿಶೇಷ ಪೂಜೆ ನಡೆಸಲಾಯಿತು. ಶಾಸಕ ವಾಲ್ಮೀಕ ನಾಯಕ ನವರಾತ್ರಿ ಉತ್ಸವದ ರಾತ್ರಿ ದೀಪವನ್ನು ಬಾನಂಗಳಕ್ಕೆ ಹಾರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಕಿವಿಗಡಚ್ಕಿುವ ಪಟಾಕಿಗಳು ನೋಡುಗರ ಗಮನ ಸೆಳೆದವು.



ರಾತ್ರಿ 9.30ಕ್ಕೆ ದೇವಿ ಅಂಬಾಭವಾನಿ ದೇವಸ್ಥಾನದ ಎದುರಿಗೆ ರಾವಣನ ಬ್ರಹತ್ ಪ್ರತಿಕೃತಿಯನ್ನು ದಹಿಸಲಾಯಿತು.



ತಾಯಪ್ಪಾ ಮೇಕಲ್, ಎಸಿಸಿ ಕಂಪೆನಿ ಅಧಿಕಾರಿ ಬಿ.ಡಿ.ದಲೇರ್, ಹರಿ ಗಲಾಂಡೆ, ರಾಜೇಶ ಕಾಂಬಳೆ ಹಾಗೂ ಜೈಭವಾನಿ ತರುಣ ಸಂಘದ ಪದಾಧಿಕಾರಿಗಳು ಉತ್ಸವದ ನೇತೃತ್ವ ವಹಿಸಿದ್ದರು. ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.