ನವರಾತ್ರಿ ಮಹೋತ್ಸವ ಇಂದಿನಿಂದ

7

ನವರಾತ್ರಿ ಮಹೋತ್ಸವ ಇಂದಿನಿಂದ

Published:
Updated:

ಬಾಳೆಹೊನ್ನೂರು: ಇಲ್ಲಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ದುರ್ಗಾಪೂಜೆಗೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆಯಲಿದೆ.ಮಂಗಳವಾರ ಮುಂಜಾನೆ ಕ್ಷೇತ್ರನಾಥ ಮಾರ್ಕಾಂ ಡೇಶ್ವರ ಸ್ವಾಮಿಗೆ ರುದ್ರಾಭಿಷೇಕ, ನಾಗದೇವರಿಗೆ ಕ್ಷೀರಾಭಿಷೇಕ, ಮೃತ್ಯಂಬಿಕಾ ಅಮ್ಮನವರಿಗೆ ಅಭಿಷೇಕ, ಸಹಸ್ರನಾಮಾರ್ಚನೆ ಹಾಗೂ ಫಲಸಮರ್ಪಣೆ ನಡೆಯಲಿದೆ. ನಂತರ ಬೆಳಿಗ್ಗೆ 9.30ಕ್ಕೆ ದುರ್ಗಾಪರಮೇಶ್ವರಿ ವಿಗ್ರಹ ಪ್ರತಿಷ್ಠಾಪಿಸಲಿದ್ದು, ಧಾರ್ಮಿಕ ಕಾರ್ಯಕ್ರಮ ಗಳಿಗೆ ಹೊರನಾಡಿನ ಗಿರಿಜಾಶಂಕರ ಜೋಷಿ ಚಾಲನೆ ನೀಡಲಿದ್ದಾರೆ.10 ಗಂಟೆಯಿಂದ ಹಂಸವಾಹಿನಿ ಬ್ರಾಹ್ಮೀ ಪೂಜೆ, ಸಪ್ತಶತೀ ಪಾರಾಯಣ ಪೂಜೆ ನೆರವೇರಲಿದ್ದು, ಸಂಜೆ ಕಟ್ಟೇಮನೆಯ ಇಂಪನಾ ಹಾಗೂ ನಿಶಾಲ್ ಅವರಿಂದ `ಗಾನಸುಧೆ~ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ವೈ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry