ನವರಾತ್ರಿ: ಮೆರವಣಿಗೆಗೆ ಚಾಲನೆ

7

ನವರಾತ್ರಿ: ಮೆರವಣಿಗೆಗೆ ಚಾಲನೆ

Published:
Updated:

ಹುಮನಾಬಾದ್: ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಪೊಲೀಸ್ ಪಾಟೀಲ ಅವರ ನಿವಾಸದಿಂದ ಹೊರಟ ಭವಾನಿ ಮಾತೆಯ ಪ್ರತಿಮೆ ಮೆರವಣಿಗೆಗೆ ಶಾಸಕ ರಾಜಶೇಖರ ಪಾಟೀಲ ಸೋಮವಾರ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.ಪಾಟೀಲ ನಿವಾಸದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ ಮುಂಭಾಗದಿಂದ ಡಾ.ಅಂಬೇಡ್ಕರ, ಶಿವಾಜಿ, ಹಳೆಯ ಅಡತ ಬಜಾರ ಮಾರ್ಗವಾಗಿ ಬಸವೇಶ್ವರ ವೃತ್ತ, ವೀರಭದ್ರೇಶ್ವರ ದೇವಸ್ಥಾನ ಹಿಂಬದಿಯಿಂದ ಜೈನ ಓಣಿಯ ಮುಖಾಂತರ ಪ್ರತಿಮೆ ಪ್ರತಿಷ್ಠಾಪಿಸಲ್ಪಡುವ ಉಮರ್ಗೆ ಓಣಿಯಲ್ಲಿನ ಎಸ್.ಎನ್.ಸ್ವಾಮಿ ಅವರ ನಿವಾಸದ ವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಶಾಲಾ ಚಿಣ್ಣರು ನಡೆಸಿಕೊಟ್ಟ ಕೋಲಾಟ ಮತ್ತು ಲೈಜಿಮ್ ಪ್ರದರ್ಶನ ಸಾರ್ವಜನಿಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು. ದಾರಿ ಉದ್ದಕ್ಕೂ ಸಾವಿರಾರು ಸಂಖ್ಯೆ ಭಕ್ತಾದಿಗಳು ಮಾತೆ ದರ್ಶನ ಪಡೆದು ಪುನಿತರಾದರು.ಭವಾನಿ ಮಾತೆಯ ಮೆರವಣಿಗೆಗೂ ಮುನ್ನ ನಡೆದ ಪೂಜೆವೇಳೆ ಪ್ರೇಮಾ ರಾಜಶೇಖರ ಪಾಟೀಲ, ಡಾ.ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಅಭಿಷೇಕ ಪಾಟೀಲ ಮೊದಲಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry