ಗುರುವಾರ , ಮೇ 13, 2021
16 °C

ನವವಿವಾಹಿತೆ ಆತ್ಮಹತ್ಯೆಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೀಣ್ಯದ ನಾಲ್ಕನೇ ಹಂತದಲ್ಲಿ ಮಂಗಳವಾರ ನವವಿವಾಹಿತೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ದೊಡ್ಡಬಳ್ಳಾಪುರದ ಗಂಗಮ್ಮ (28) ಆತ್ಮಹತ್ಯೆ ಮಾಡಿಕೊಂಡವರು.

ಆರು ತಿಂಗಳ ಹಿಂದೆ ಕ್ಯಾಬ್ ಚಾಲಕ ರಾಮಾಂಜಿನಪ್ಪ ಎಂಬಾತನನ್ನು ವಿವಾಹವಾಗಿದ್ದ ಅವರು, ಪತಿ ಮತ್ತು ಅತ್ತೆ ರಾಧಾ ಜತೆ ಪೀಣ್ಯದಲ್ಲಿ ನೆಲೆಸಿದ್ದರು. ರಾಧಾ, ರೈಲ್ವೆ ಇಲಾಖೆಯಲ್ಲಿ ಗುಮಾಸ್ತೆಯಾಗಿದ್ದಾರೆ.ಗಂಗಮ್ಮ, ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಈ ವೇಳೆ ಅವರ ಪತಿ ಕೆಲಸಕ್ಕೆ ಹೋಗಿದ್ದರು. ಅತ್ತೆ ಸಂಬಂಧಿಕರ ಮನೆಗೆ ಹೋಗಿದ್ದರು. ರಾಮಾಂಜಿನಪ್ಪ ಸಂಜೆ ಆರು ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಮನೆ ಭೋಗ್ಯಕ್ಕೆ ಪಡೆಯಲು ನಾಲ್ಕು ಲಕ್ಷ ರೂಪಾಯಿ ಹಣ ತರುವಂತೆ ಅಳಿಯ ಮತ್ತು ಆತನ ತಾಯಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಮಗಳ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ' ಎಂದು ಗಂಗಮ್ಮ ಅವರ ತಂದೆ ನರಸಿಂಹಯ್ಯ ದೂರು ಕೊಟ್ಟಿದ್ದಾರೆ.

ಆ ದೂರನ್ನು ಆಧರಿಸಿ ಗಂಗಮ್ಮ ಅವರ ಪತಿ ಮತ್ತು ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳದಿಂದ ಸಾವು (498ಎ) ಹಾಗೂ ಆತ್ಮಹತ್ಯೆಗೆ ಪ್ರಚೋದನೆ (306) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಮಾಂಜಿನಪ್ಪನನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರುವ ರಾಧಾ ಅವರ ಹುಡುಕಾಟ ಮುಂದುವರಿದಿದೆ ಎಂದು ಪೀಣ್ಯ ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.