ನವವಿವಾಹಿತೆ ಆತ್ಮಹತ್ಯೆ

7

ನವವಿವಾಹಿತೆ ಆತ್ಮಹತ್ಯೆ

Published:
Updated:

ಬೆಂಗಳೂರು: ಮಹದೇವಪುರ ಸಮೀ­ಪದ ಅಂಬೇಡ್ಕರ್‌ ಕಾಲೊ­ನಿಯಲ್ಲಿ ಬುಧವಾರ ಮಧುಕುಮಾರಿ (26) ಎಂಬ ನವವಿವಾಹಿತೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ.ಮೂಲತಃ ಹಾಸನದವರಾದ ಮಧುಕುಮಾರಿ, ಮೂರು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೃಷಿಕರೊಬ್ಬರನ್ನು ವಿವಾಹವಾಗಿದ್ದರು.ಅವರ ತಂಗಿ ಶೋಭಾ, ನಗರದ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡು ತ್ತಿದ್ದು, ಅಂಬೇಡ್ಕರ್‌ ಕಾಲೊನಿಯಲ್ಲಿ ವಾಸವಾಗಿದ್ದಾರೆ. ಬುಧವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಮದ್ದೂ ರಿನಿಂದ ತಂಗಿಯ ಮನೆಗೆ ಂದ ಮಧುಕುಮಾರಿ, ಕೋಣೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸಕ್ಕೆ ಹೋಗಿದ್ದ ಶೋಭಾ ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ಕೆಲಸ ಮಾಡಲು ಇಚ್ಛಿಸಿದ್ದ ಅಕ್ಕ, ಪೋಷಕರ ಒತ್ತಾಯಕ್ಕೆ ಮಣಿದು ರೈತನನ್ನು ಮದುವೆಯಾದಳು. ಬೆಳಿಗ್ಗೆ ಮನೆಗೆ ಬಂದ ಆಕೆ ಈ ಬಗ್ಗೆ ಅಳಲು ತೋಡಿಕೊಂಡಿದ್ದಳು. ಜತೆಗೆ ನನ್ನ ಮದುವೆ ವಿಚಾರವಾಗಿಯೂ ಇಬ್ಬರ ನಡುವೆ ಸಣ್ಣ ಜಗಳವಾಗಿತ್ತು. ಹೀಗೆ ಹಲವು ಕಾರಣಗಳಿಂದ ನೊಂದಿದ್ದ ಅಕ್ಕ, ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾಳೆ’ ಎಂದು ಶೋಭಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry