ನವಾಜ್ ಹ್ಯಾಟ್ರಿಕ್!

7

ನವಾಜ್ ಹ್ಯಾಟ್ರಿಕ್!

Published:
Updated:
ನವಾಜ್ ಹ್ಯಾಟ್ರಿಕ್!

ಕಾನ್ ಉತ್ಸವದಲ್ಲಿ ಚಿತ್ರನಟಿಯರೆಲ್ಲ ರತ್ನಗಂಬಳಿಯ ಮೇಲೆ ನಿಂತು ನಗುಚೆಲ್ಲುವುದರಲ್ಲಿಯೇ ಸಾರ್ಥಕ್ಯ ಕಾಣುತ್ತಿದ್ದರೆ, ಹಿಂದಿ ಚಿತ್ರನಟ ನವಾಜುದ್ದೀನ್ ಸಿದ್ದಿಕಿಯ ಸಂಭ್ರಮವೇ ಬೇರೆ. ಕಾನ್‌ನಲ್ಲಿ ಪಾಲ್ಗೊಳ್ಳದಿದ್ದರೂ ಅವರ ನಟನೆಯ ಮೂರು ಚಿತ್ರಗಳು ಪ್ರದರ್ಶಿತವಾಗುತ್ತಿವೆ.ಈ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತ ಪಡಿಸುತ್ತಲೇ ಸಿದ್ದಿಕಿ, `ಇದು ಭಾರತೀಯ ಚಿತ್ರೋದ್ಯಮದಲ್ಲಿಯೂ ಒಂದು ದಾಖಲೆ~ ಎಂದು ಹೇಳಿದ್ದಾರೆ.ಅಶಿಮ್ ಅಹ್ಲುವಾಲಿಯಾ ಅವರ `ಮಿಸ್ ಲವ್ಲಿ~, ಅನುರಾಗ್ ಕಶ್ಯಪ್ ಅವರ ಎರಡು ಭಾಗಗಳ ಸರಣಿ, `ಗ್ಯಾಂಗ್ಸ್ ಆಫ್ ವಾಸ್ಸೇಪುರ~ ಹಾಗೂ ಸಣ್ಣ ಪಾತ್ರವೊಂದರಲ್ಲಿ ಮಿಂಚಿ ಮಾಯವಾಗುವ `ಕಹಾನಿ~ ಚಿತ್ರಗಳು ಪ್ರದರ್ಶಿತವಾಗುತ್ತಿವೆ.ಮಿಸ್ ಲವ್ಲಿ ಚಿತ್ರದ ಬಗ್ಗೆ ಮಾತನಾಡುತ್ತ ನವಾಜುದ್ದೀನ್ ಅಶೀಮ್ ಅಹ್ಲುವಾಲಿಯಾ ಅವರನ್ನು ಬಾಯ್ತುಂಬಾ ಹೊಗಳುತ್ತಾರೆ.ಈ ಚಿತ್ರದಲ್ಲಿ ನವಾಜುದ್ದೀನ್ ಚಿತ್ರ ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ನೆಲೆ ಕಾಣಲು ಹೋರಾಡುವ ನಟಿಯೊಬ್ಬಳನ್ನು ಪ್ರೀತಿಸುವ ನಿರ್ದೇಶಕನ ಪಾತ್ರ ಅದು. ಅಶೀಮ್ ಬಾಲಿವುಡ್ ಚಿತ್ರಗಳನ್ನು ನೋಡುವುದಿಲ್ಲ. ಹಾಗಾಗಿ ಈ ಚಿತ್ರದಲ್ಲಿ ಹಾಲಿವುಡ್‌ನ ಛಾಯೆಯನ್ನು ಕಾಣಬಹುದಾಗಿದೆ. ಚಿತ್ರ ಮೂಡಿಬಂದಿರುವ ರೀತಿಯೇ ವಿಶೇಷವಾಗಿದೆ ಎಂದೆಲ್ಲ ನವಾಜುದ್ದೀನ್ ಹೊಗಳಿದ್ದಾರೆ. ಕಾನ್‌ಗೆ ತೆರಳಲಿರುವ ತಯಾರಿಯಲ್ಲಿರುವ ನವಾಜುದ್ದೀನ್ ಯಾವತ್ತಿಗೂ ಪ್ರಚಾರದಿಂದ ದೂರವೇ ಅಂತೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry