ನವೀಕೃತ ಕೆರೆಗೇ ಕಸ ಸುರಿವ ಬಗೆ!

7

ನವೀಕೃತ ಕೆರೆಗೇ ಕಸ ಸುರಿವ ಬಗೆ!

Published:
Updated:

ಪಾಲಿಕೆ ವ್ಯಾಪ್ತಿಯಲ್ಲಿ ಕಸವನ್ನು ಸಮರ್ಪಕವಾಗಿ ಎತ್ತಿ ನಿಗದಿತ ಸ್ಥಳಕ್ಕೆ ಸಾಗಣೆ ಮಾಡುವವರೇ ಆ ವಾರ್ಡಿನ ಕಸವನ್ನು ಈ ವಾರ್ಡಿಗೆ, ಈ ವಾರ್ಡಿನ ಕಸವನ್ನು ಆ ವಾರ್ಡಿಗೆ ಸುರಿದು ಕಸ ಎತ್ತುವ ನಾಟಕವಾಡುತ್ತಾರೆ.ಜಕ್ಕೂರು ಕೆರೆಯನ್ನು 2,191 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದರೂ ಬಳ್ಳಾರಿ ರಸ್ತೆ ಬ್ಯಾಟರಾಯನಪುರ ಬಿಬಿಎಂಪಿಗೆ ಸೇರಿದ ಕಸ ಸಾಗಣೆ ವಾಹನದಿಂದ ಕಸ ತಂದು ಜಕ್ಕೂರು ಕೆರೆ ಕಟ್ಟೆಯ ಮೇಲೆ ಮತ್ತೆ ಸುರಿಯುತ್ತಿದ್ದಾರೆ.ಈ ಬಗ್ಗೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೆ ‘ಹೌದಾ’ ಎಂಬ ಉದ್ಗಾರ ತೆಗೆಯುತ್ತಾರೆ.ಕಸ ಸಾಗಿಸುವ ಗುತ್ತಿಗೆದಾರರ ಮೇಲೆ ಕೆಂಗಣ್ಣು ಬೀರುವ ಬಿಬಿಎಂಪಿ ಅಧಿಕಾರಿಗಳು, ಮತ್ತೊಂದೆಡೆ ಇವರದೇ ವಾಹನದಲ್ಲಿ ನಾಗರಿಕ ಪ್ರದೇಶದಿಂದ ಸಂಗ್ರಹ ಮಾಡಿದ ಕಸ ತಂದು ಅಭಿವೃದ್ಧಿ ಮಾಡಿರುವ ಕೆರೆಕಟ್ಟೆಯಲ್ಲಿ ಸುರಿಯುವುದು ಸರಿಯೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry