ನವೀಕೃತ ಝೈಲೊ ರಾಜ್ಯದ ಮಾರುಕಟ್ಟೆಗೆ

7

ನವೀಕೃತ ಝೈಲೊ ರಾಜ್ಯದ ಮಾರುಕಟ್ಟೆಗೆ

Published:
Updated:

ಬೆಂಗಳೂರು:  ವಾಹನ ತಯಾರಿಕಾ ಸಂಸ್ಥೆ ಮಹೀಂದ್ರಾ ಅಂಡ್ ಮಹೀಂದ್ರಾ ಬಹು ನಿರೀಕ್ಷಿತ  ಮಹೀಂದ್ರಾ ಝೈಲೊದ (ಎಂಯುವಿ)  ನವೀಕೃತ ಮಾದರಿಯನ್ನು ರಾಜ್ಯದ ಮಾರುಕಟ್ಟೆಗೆ  ಬಿಡುಗಡೆ ಮಾಡಿತು.ಈ ನವೀಕೃತ ಮಾದರಿಯಲ್ಲಿ ಒಟ್ಟು 50 ಹೊಸ ಬದಲಾವಣೆ ಅಳವಡಿಸಲಾಗಿದೆ.  ದೀಪ ಬೆಳಗಿಸುವ, ಆರಿಸುವ, ಬಾಗಿಲು ಲಾಕ್ ಮಾಡುವುದು, ತೆಗೆಯುವುದಕ್ಕೆ ಧ್ವನಿ ಆಧಾರಿತ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ.  ಹೊಸ ಬಾಹ್ಯ ನೋಟ ಮತ್ತು ಒಳಾಂಗಣ ವಿನ್ಯಾಸ ಹೊಂದಿರುವ ವಾಹನವನ್ನು ಗ್ರಾಹಕರ ಅಗತ್ಯಗಳನ್ನು ಆಧರಿಸಿ ಅಳವಡಿಸಲಾಗಿದೆ.ಸಾಕಷ್ಟು ಸ್ಥಳಾವಕಾಶ, ಆರಾಮದಾಯಕ ಅನುಕೂಲಗಳಿಗೆ   ಒತ್ತು ನೀಡಲಾಗಿದೆ.  ಹೊಸ ನವೀಕೃತ ವಾಹನವು ಐದು ಮಾದರಿಗಳಲ್ಲಿ ಮತ್ತು 6 ಬಣ್ಣಗಳಲ್ಲಿ ಲಭ್ಯವಿದೆ. ಆರಂಭಿಕ ಮಾದರಿಯ ಎಕ್ಸ್‌ಷೋರೂಂ ಬೆಲೆ ್ಙ 7.37 ಲಕ್ಷ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry