ನವೋದಯ ಪರೀಕ್ಷೆಗೆ 23ವಿದ್ಯಾರ್ಥಿಗಳ ಗೈರು!

7

ನವೋದಯ ಪರೀಕ್ಷೆಗೆ 23ವಿದ್ಯಾರ್ಥಿಗಳ ಗೈರು!

Published:
Updated:

ಯಲಬುರ್ಗಾ: ಸ್ಥಳೀಯ ಶಾಸಕರ ಮಾದಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ನವೋದಯ ಪ್ರವೇಶ ಪರೀಕ್ಷೆಗೆ 572 ವಿದ್ಯಾರ್ಥಿಗಳು ಹಾಜರಾಗಿ 23 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸೇರಿದಂತೆ ಒಟ್ಟು 595 ವಿದ್ಯಾರ್ಥಿಗಳ ಪೈಕಿ 344ಬಾಲಕರು, 251ಬಾಲಕಿಯರು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು, ಅದರಲ್ಲಿ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂತು.  ಕೇವಲ 111ನಗರ ಪ್ರದೇಶ, 484ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದಾರೆ. ಒಟ್ಟಾರೆ ಪರೀಕ್ಷೆಯಲ್ಲಿ ನೋಂದಾಯಿಸಿಕೊಂಡವರ ಪೈಕಿ 42ಪರಿಶಿಷ್ಟ ಜಾತಿ, 94 ಪರಿಶಿಷ್ಟ ಪಂಗಡ, 410 ಹಿಂದುಳಿದ ವರ್ಗ ಹಾಗೂ 49 ವಿದ್ಯಾರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದಾರೆ.ಒಟ್ಟು 34ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆಮಾಡಲಾಗಿತ್ತು. 40ಕ್ಕು ಅಧಿಕ ಸಂಖ್ಯೆಯ ಸಿಬ್ಬಂದಿ ಸದ್ರಿ ಪರೀಕ್ಷೆಯಲ್ಲಿ ಪಾಲ್ಗೊಂಡು ವ್ಯವಸ್ಥಿತ ರೀತಿಯಲ್ಲಿ ನಡೆಸಿದ್ದು ಕಂಡು ಬಂತು. ಕುಕನೂರು ನವೋದಯ ವಸತಿ ಶಾಲೆಯ ಮುಖ್ಯಸ್ಥರಾದ ಸಾವಿತ್ರಿ ದವಡಿ, ಸಂಜೀವ ಬಾಗನಿ, ಸಂದೇಶ ಮಾಲಜೇರಿ, ಸ್ಥಳೀಯ ಶಿಕ್ಷಕ ಲಕ್ಷ್ಮಣಸಿಂಗ್ ಮುಖ್ಯೋಪಾಧ್ಯಾಯ ಜನಕಪ್ಪ ಚವಡಿ, ಎಂ.ವಿ. ಪಾಟೀಲ, ಮಂಗಳೇಪ್ಪ ಜನಾದ್ರಿ, ಪಿಎಸ್‌ಐ ಕೆ.ಎಚ್. ನಡುಗಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry