ನವೋದಯ ಪರೀಕ್ಷೆಗೆ 591 ವಿದ್ಯಾರ್ಥಿಗಳು ಹಾಜರ್

7

ನವೋದಯ ಪರೀಕ್ಷೆಗೆ 591 ವಿದ್ಯಾರ್ಥಿಗಳು ಹಾಜರ್

Published:
Updated:

ಚಿಂತಾಮಣಿ: ತಾಲ್ಲೂಕಿನಲ್ಲಿ ಭಾನು ವಾರ ನಡೆದ ಪ್ರಸಕ್ತ ಸಾಲಿನ ನವೋದಯ ಶಾಲೆಯ ಪ್ರವೇಶ ಪರೀಕ್ಷೆಗೆ ಈ ಬಾರಿ 591 ವಿದ್ಯಾರ್ಥಿಗಳು ಹಾಜರಾಗಿದ್ದರು.ನಗರದ ಮಹಾತ್ಮ ಗಾಂಧಿ ಬಾಲಕರ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ವೆಂಕಟಗಿರಿಕೋಟೆ ಸರ್ಕಾರಿ ಪ್ರೌಢಶಾಲೆ, ಏನಿದೆಲೆಯಲ್ಲಿನ ಶಾಲೆಯಲ್ಲಿ ಪರೀಕ್ಷೆ ನಡೆದವು.ಒಟ್ಟು 643 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದರು.  ಕ್ಷೇತ್ರ ಶಿಕ್ಷಣಾ ಧಿಕಾರಿ ಬೈಲಾಂಜನೇಯಪ್ಪ, ಚಿಕ್ಕ ಬಳ್ಳಾಪುರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿ ಅಧಿಕಾರಿ ಸೈಯಿದಾಬೇಗಂ, ಪ್ರಾಂಶು ಪಾಲ ವಿಜಯಕುಮಾರಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆ ಸೇರಿ 80 ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಒಟ್ಟು ಜಿಲ್ಲೆಯಲ್ಲಿ  4500 ಮಂದಿ ಪರೀಕ್ಷೆ ಬರೆದಿದ್ದಾರೆ. ಸೂಕ್ತ ಮಾನದಂಡ ಆಧಾರದ ಮೇಲೆ ಆಯ್ಕೆ ನಡೆಯಲಿದೆ ಎಂದು ಪ್ರಾಂಶುಪಾಲ ರಾದ ವಿಜಯಕುಮಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry