ಶನಿವಾರ, ಏಪ್ರಿಲ್ 17, 2021
22 °C

ನವೋದಯ ಶಾಲೆ:ಪರೀಕ್ಷೆ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಭಾರತ ಸರ್ಕಾರವು ಜವಾಹರ್ ನವೋದಯ ವಿದ್ಯಾಲಯ ಪ್ರಾರಂಭಿಸಿ, 5ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉತ್ತಮರಲ್ಲಿ ಸರ್ವೋತ್ತಮರನ್ನು ಗುರುತಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ಕೊಡುತ್ತಾ ಬಂದಿದೆ.ಆದರೆ ಪ್ರಸಕ್ತ ವರ್ಷ ಪರೀಕ್ಷೆಯು ಕಳೆದ ತಿಂಗಳು ಫೆಬ್ರವರಿ 6 ರಂದು ನಡೆಯಬೇಕಿತ್ತು. ಆದರೂ, ಪರೀಕ್ಷೆ ನಡೆಯದೇ ವಿದ್ಯಾರ್ಥಿಗಳು, ಪೋಷಕರು ಮತ್ತು ತರಬೇತಿ ಶಿಕ್ಷಕರು ಗೊಂದಲಕ್ಕೆ ಈಡಾಗಿದ್ದಲ್ಲದೇ ಇಲ್ಲಿಯವರೆಗೂ ಪರೀಕ್ಷೆ ಮುಂದೂಡಿದ ದಿನಾಂಕವಾಗಲೀ, ಪರೀಕ್ಷೇ ಏತಕ್ಕಾಗಿ ಸ್ಥಗಿತಗೊಂಡಿದೆ ಎಂಬುವುದಾಗಲೀ ಯಾವುದಕ್ಕೂ ನಿಖರವಾಗಿ ಉತ್ತರ ಸಿಕ್ಕಿಲ್ಲ.ಈ ವಿಷಯವಾಗಿ ಬಿ.ಇ.ಓ ಕಚೇರಿ, ಡಿ.ಡಿ.ಪಿ.ಐ ಕಚೇರಿಗಳಿಗೆ ಅಲೆದರೂ ನಿಖರವಾದ ಕಾರಣವನ್ನು ಕೊಡಲು ಶಿಕ್ಷಣಾಧಿಕಾರಿಗಳು ಸಿದ್ಧರಿಲ್ಲ. ಜವಾಹರ್ ನವೋದಯ ಪರೀಕ್ಷಾ ದಿನಾಂಕದ ಬಗ್ಗೆ ವಿದ್ಯಾರ್ಥಿಗಳ ಗೊಂದಲದ ಪರಿಹಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನ ಹರಿಸಬೇಕಿದೆ. 

      

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.