ನವ ಯುಗಾದಿಗೆ ಸ್ವಾಗತ

7
ಚಂದಪದ್ಯ

ನವ ಯುಗಾದಿಗೆ ಸ್ವಾಗತ

Published:
Updated:

ಒಂದಾಗಿ ಹಾಡೋಣ ನವವರ್ಷ ಗೀತ

ಸ್ವಾಗತವ ಮಾಡೋಣ ಶುಭದೊಸಗೆ ಸಹಿತಕಾರ್ಮೋಡವೋಸರಿಸಿ ರವಿಯು ಬೆಳಗುತ ಬರಲಿ

ಮಧುಮಯ ಸುವಾರ್ತೆಯನು ಮಾರುತನು ತರಲಿ

ಮಾನವಾಂತಃಕರಣ ಸುಪ್ರಸನ್ನತೆಗೊಳಲಿ

ರಕ್ತರಂಜನೆ ನಿಲಲಿ, ನೀತಿ ಗೆಲಲಿ!ಉತ್ಪಾತ, ಉನ್ಮಾದ ಉಡುಗಿ ಹೋಗಲಿ ವಿಮಲ

ಉಲ್ಲಾಸದೊಸರುಕ್ಕಿ ಬದುಕ ತೋಯಿಸಲಿ

ಎಲ್ಲವರ ಹೃದಯದಲಿ ಸಲ್ಲಲಿತ ಸುಪ್ರೇಮ

ಪಲ್ಲವಿಸಿ ಸೋದರತೆ ಹಸನುಗೊಳಲಿಮಳೆಬೆಳೆಗಳೆಲ್ಲೆಡೆಯು ಸಮೃದ್ಧವಾಗಿರಲಿ

ತುಷ್ಟಿ ಪುಷ್ಟಿಯು ಶಾಂತಿ ಪಸರಿಸಿರಲಿ

ಅಜ್ಞಾನ, ದಾರಿದ್ರ್ಯವಡಗಿ ಅರಿವಿನ ಬೆಳಕು

ಸರ್ವಚೇತನಗಳನು ಮುನ್ನಡೆಸಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry