`ನಶಾ'ದ ನಶೆಯಲ್ಲಿ ಪೂನಂ

7

`ನಶಾ'ದ ನಶೆಯಲ್ಲಿ ಪೂನಂ

Published:
Updated:
`ನಶಾ'ದ ನಶೆಯಲ್ಲಿ ಪೂನಂ

`ಕಾಂಟ್ರವರ್ಸಿ ಕ್ವೀನ್' ಪೂನಂ ಪಾಂಡೆ ಆರು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ. ಬಳುಕೋ ಬಳ್ಳಿಯಂತಿದ್ದ ಪೂನಂ ಯಾಕೆ ದುಂಡಗಾದರು ಅಂತ ಹುಬ್ಬೇರಿಸಬೇಡಿ. ಪೂನಂ ನಟಿಸುತ್ತಿರುವ ಮೊದಲ ಚಿತ್ರ `ನಶಾ' ಸಿನಿಮಾದಲ್ಲಿನ ಪಾತ್ರ ಬೇಡಿದ್ದರಿಂದ ಆಕೆ ಆರು ಕಿಲೋ ದಪ್ಪಗಾಗಿ ತನ್ನ ಉಬ್ಬುತಗ್ಗುಗಳನ್ನು ಮತ್ತಷ್ಟು ತೀಡಿಟ್ಟುಕೊಂಡಿದ್ದಾರಂತೆ.ವಿಶ್ವಕಪ್‌ನಲ್ಲಿ ಭಾರತ ತಂಡ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿ ಇಡೀ ದೇಶವೇ ತನ್ನತ್ತ ತಿರುಗುವಂತೆ ಮಾಡಿದ್ದ ಪೂನಂ ಮೊದಲು ಫ್ಯಾಷನ್ ಲೋಕದಲ್ಲಿ ಕಾಣಿಸಿಕೊಂಡವರು. ರೂಪದರ್ಶಿಯಾಗಿದ್ದುಕೊಂಡೇ ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿದ್ದ ಪೂನಂ ಈಗ ಬಾಲಿವುಡ್‌ಗೂ ಎಂಟ್ರಿ ನೀಡಿದ್ದಾರೆ.`ಸುಖಾಸುಮ್ಮನೆ ಯಾವುದನ್ನೂ ಒಪ್ಪಿಕೊಳ್ಳುವವಳಲ್ಲ ನಾನು. ಯಾವುದೇ ಕೆಲಸ ಮಾಡುವ ಮುನ್ನ ಸಾಕಷ್ಟು ಯೋಚಿಸುತ್ತೇನೆ. `ನಶಾ' ಚಿತ್ರದ ನಿರ್ದೇಶಕ ಅಮಿತ್ ಸಕ್ಸೇನಾ ಬಂದು ನೀನು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕು ಎಂದಾಗ ಮೊದಲಿಗೆ ಏನು ಹೇಳಬೇಕು ಎಂದು ತೋಚಲಿಲ್ಲ. ಆದರೆ, ಸ್ಕ್ರಿಪ್ಟ್ ಓದಿದ ನಂತರ ನನಗೆ ಅರ್ಥವಾಯ್ತು. ಪಾತ್ರಕ್ಕೆ ನ್ಯಾಯ ಒದಗಿಸಬೇಕಾದರೆ ನಿರ್ದೇಶಕರ ಅಣತಿಯಂತೆ ನಡೆಯಬೇಕು ಅಂತ ಅನಿಸಿತು. ಹಾಗಾಗಿ ನಾನು ಆರು ಕಿಲೋ ತೂಕ ಹೆಚ್ಚಿಸಿಕೊಂಡಿದ್ದೇನೆ. ಈಗ ನನ್ನ ದೇಹ ಮೊದಲಿಗಿಂತಲೂ ಸುಂದರವಾಗಿದೆ. ನನ್ನ ದೇಹದಲ್ಲಿ ಆಗಿರುವ ಬದಲಾವಣೆ ಪ್ರೇಕ್ಷಕರಿಗೆ ಕಿಚ್ಚುಹಚ್ಚಲಿದೆ' ಎಂದಿದ್ದಾರೆ ಈ ಬೆಡಗಿ.`ನಶಾ' ಚಿತ್ರವನ್ನು ಆದಿತ್ಯಾ ಭಾಟಿಯಾ ನಿರ್ಮಾಣ ಮಾಡುತ್ತಿದ್ದು ಇದೊಂದು ವಯಸ್ಕರ ಚಿತ್ರವಂತೆ. ಅಲ್ಲದೇ ಪೂನಂ ಸಹ `ನಶಾ' ಚಿತ್ರ ಚೆನ್ನಾಗಿ ಮೂಡಿಬರಬೇಕೆಂದು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಪೂನಂ ನಟನೆ ಮತ್ತು ಸೌಂದರ್ಯ ಪ್ರೇಕ್ಷಕನಲ್ಲಿ ಯಾವ ರೀತಿ ನಶೆ ಏರಿಸಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry