ಸೋಮವಾರ, ಜೂನ್ 21, 2021
29 °C
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸೋನಿ ಕಂಪೆನಿ

ನಷ್ಟಭರ್ತಿಗಾಗಿ ಆಸ್ತಿ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಎಫ್‌ಪಿ): ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಪಾನ್‌ ಮೂಲದ ಸೋನಿ ಕಾರ್ಪೊರೇಷನ್‌,  ನಷ್ಟಭರ್ತಿಗಾಗಿ ಟೋಕಿ­ಯೊದಲ್ಲಿನ ತನ್ನ ಒಡೆತನಕ್ಕೆ ಸೇರಿದ ಆಸ್ತಿಯನ್ನು ಮಾರಾಟ ಮಾಡು­ವುದಾಗಿ ಹೇಳಿದೆ.ಕಳೆದ 6 ದಶಕಗಳಿಂದ ಸೋನಿ ಕಂಪೆ­ನಿಯ ಮುಖ್ಯ ಕಚೇರಿ ಈ ಸ್ಥಳದಲ್ಲಿ ಕಾರ್ಯ­ನಿರ್ವಹಿಸುತ್ತಿದೆ. ಇದನ್ನು ಸೋನಿಯ ‘ಜನ್ಮಸ್ಥಳ’ ಎಂದೇ ಕರೆಯಲಾ­ಗುತ್ತದೆ.ರಿಯಲ್‌ ಎಸ್ಟೇಟ್‌ ಕಂಪೆನಿ ಸುಮಿ­ಟೊಮೊ ರಿಯಾಲ್ಟಿಗೆ  1570 ಕೋಟಿ ಡಾಲರ್‌ಗಳಿಗೆ (₨97,340 ಕೋಟಿ) ಇಲ್ಲಿನ ಆಸ್ತಿ  ಮಾರಾಟ ಮಾಡಲು ಕಂಪೆನಿ ಒಪ್ಪಂದ ಮಾಡಿಕೊಂಡಿದೆ. ಮಾರಾಟ ಪ್ರಕ್ರಿಯೆ ಬಹುತೇಕ ಮುಂದಿನ ತಿಂಗಳು ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಎರಡನೆಯ ಮಹಾಯುದ್ದದ ನಂತರ 1946ರಲ್ಲಿ ಸೋನಿ ಕಂಪೆನಿಯ ಮುಖ್ಯ ಕಚೇರಿ ಟೋಕಿಯೊದ ಹೃದಯ ಭಾಗವಾಗ ಟುಶಿನ್‌ ಕೊಯೊದಲ್ಲಿ ಪ್ರಾರಂಭ­ಗೊಂಡಿತ್ತು. ನಂತರ ಇದನ್ನು  ಇಲ್ಲಿಗೆ ಸಮೀಪದ ಶಿನಗವಾ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಗೊಟೆನ್‌­ಯಾಮಾ ಪ್ರದೇಶಕ್ಕೆ ಬದಲಾ­ಯಿಸಲಾಗಿತ್ತು.  2007ರಲ್ಲಿ ಕಂಪೆನಿ ತನ್ನ ಆಸ್ತಿಯಲ್ಲಿ ಸ್ವಲ್ಪ ಭಾಗವನ್ನು ಮಾರಾಟ ಮಾಡಿತ್ತು. ಇದೀಗ ಉಳಿದ ಆಸ್ತಿಯನ್ನೂ ಮಾರಾಟ ಮಾಡಲು ನಿರ್ಧರಿಸಿದೆ.ಸತತ 4 ವರ್ಷಗಳ ನಷ್ಟ ತುಂಬಿ­ಕೊಳ್ಳಲು ಅಮೆರಿಕದ ಮ್ಯಾನ್‌ಹಟನ್‌­ನಲ್ಲಿರುವ ಕಂಪೆನಿಯ ಕಚೇರಿಯನ್ನು ಮಾರಾಟ ಮಾಡು­ವುದಾಗಿ ಕಳೆದ ವರ್ಷ ಸೋನಿ ಹೇಳಿತ್ತು.ಸೋನಿ ಮತ್ತು ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಪಾನಾಸೋನಿಕ್‌ ಮತ್ತು ಶಾರ್ಪ್‌ ಕೂಡ ಎಲೆಕ್ಟ್ರಾನಿಕ್ ಮಾರು­ಕಟ್ಟೆ­ಯಲ್ಲಿ ವಿದೇಶಿ ಕಂಪೆನಿಗಳಿಂದ ತೀವ್ರ  ಸ್ಪರ್ಧೆ ಎದುರಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ನಷ್ಟದ ಹಾದಿಯಲ್ಲಿವೆ.ಕಳೆದ ವರ್ಷ ಸೋನಿ 108 ಕೋಟಿ ಡಾಲರ್‌ಗಳಷ್ಟು (₨6696 ಕೋಟಿ) ನಷ್ಟ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿ ಪರ್ಸನಲ್‌ ಕಂಪ್ಯೂಟರ್‌ (ಪಿಸಿ) ಮಾರು­ಕಟ್ಟೆಯಿಂದ ಹೊರಬರಲು ನಿರ್ಧರಿಸಿದೆ. ಪ್ರಪಂಚ­ದಾದ್ಯಂತ 5 ಸಾವಿರ ಉದ್ಯೋಗ ಕಡಿತ ಮಾಡು­ವುದಾಗಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.