ಶುಕ್ರವಾರ, ನವೆಂಬರ್ 15, 2019
22 °C

ನಾಕೌಟ್ ಪಂದ್ಯಗಳ ಸ್ಥಳಾಂತರ ಸಾಧ್ಯತೆ

Published:
Updated:

ನವದೆಹಲಿ (ಪಿಟಿಐ): ಐಪಿಎಲ್ ಟೂರ್ನಿಯ `ಕ್ವಾಲಿಫಯರ್' ಮತ್ತು `ಎಲಿಮಿನೇಟರ್' ಪಂದ್ಯಗಳನ್ನು ಚೆನ್ನೈನಿಂದ ಬೇರೆಡೆಗೆ ಸ್ಥಳಾಂತರಿಸಲು ಐಪಿಎಲ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಸೋಮವಾರ ಚೆನ್ನೈನಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆಯಿದೆ.ಈ ಬಗ್ಗೆ ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, `ಪಂದ್ಯಗಳ ಸ್ಥಳಾಂತರ ಮಾಡುವ ಕುರಿತು ಏಪ್ರಿಲ್ 22ರಂದು ಚೆನ್ನೈನಲ್ಲಿ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದರು.ಈ ಮೊದಲಿನ ವೇಳಾಪಟ್ಟಿಯಲ್ಲಿ ಮೇ 21ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫಯರ್ ನಡೆಯಬೇಕಿತ್ತು.

ಪ್ರತಿಕ್ರಿಯಿಸಿ (+)