ನಾಗರಿಕರ ಸಮಸ್ಯೆಗೆ ಸ್ಪಂದಿಸಲು ಸೂಚನೆ

7

ನಾಗರಿಕರ ಸಮಸ್ಯೆಗೆ ಸ್ಪಂದಿಸಲು ಸೂಚನೆ

Published:
Updated:

ಸಕಲೇಶಪುರ: ಗ್ರಾ.ಪಂ.ಗಳಲ್ಲಿ ಕಾರ್ಯದರ್ಶಿ, ಪಿಡಿಓ ಹಾಗೂ ಬಿಲ್ ಕಲೆಕ್ಟರ್‌ಗಳು ಜನರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಣೆ ಮಾಡುವುದು ಅಗತ್ಯವಾಗಿದೆ ಎಂದು ಶಾಸಕ ಎಚ್. ಕೆ.ಕುಮಾರಸ್ವಾಮಿ ಹೇಳಿದರು.ತಾಲ್ಲೂಕಿನ ಉದೇವಾರ ಗ್ರಾಮದಲ್ಲಿ ಗ್ರಾಪಂ. ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉತ್ತಮ ಗುಣಮಟ್ಟದಲ್ಲಿ ನಿಗದಿತ ಅವದಿ ಒಳಗೆ ನಿರ್ಮಾಣ ಮಾಡಿದ ತಾಲ್ಲೂಕಿನಲ್ಲಿ ಮೊದಲು, ಜಿಲ್ಲೆಯಲ್ಲಿ ಎರಡನೇ ಗ್ರಾಪಂಯಾಗಿದೆ ಎಂದರು.ಸರ್ಕಾರ ಅಧಿಕಾರ ವಿಕೇಂದ್ರೀಕರ ಣಕ್ಕಾಗಿ ಸ್ಥಳೀಯ ಸಂಸ್ಥೆಗಳನ್ನು ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ ಸಾಲದು. ಬೋರ್‌ವೆಲ್ ರಿಪೇರಿ, ಬೀದಿದೀಪ ಅಳವಡಿಕೆ, ವಾಸದ ದೃಢಿಕರಣದಂತಹ ಸಣ್ಣ ಪುಟ್ಟ ಕೆಲಸಗಳನ್ನಾದರೂ ತುರ್ತಾಗಿ ಮಾಡುವ ಪ್ರಾಮಾಣಿಕತೆ ಅಧಿಕಾರಿ ಗಳು ಹಾಗೂ ಸಿಬ್ಬಂದಿಗೆ ಬೇಕು ಎಂದರು.ತಮ್ಮ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸಂಸದರ ಅನುದಾನದಲ್ಲಿ 75 ಲಕ್ಷ ರೂಪಾಯಿ ನೀಡಲಾಗಿದೆ. ಕೆಸಗುಲಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಲ್ಲಿ 3 ಲಕ್ಷ ಹಾಗೂ ತಮ್ಮ ಅನುದಾನದಲ್ಲಿ ಲಕ್ಷ ರೂಪಾಯಿ ನೀಡಲಾಗಿದೆ. ಗ್ರಾಮದ ಮಾರಮ್ಮ ದೇವಸ್ಥಾನ ಕಟ್ಟಡಕ್ಕೆ ಆರಾಧನಾ ಸಮಿತಿಯಿಂದ 25 ಸಾವಿರ ರೂಪಾಯಿ ನೀಡಲಾಗುವುದು ಎಂದರು.ಗ್ರಾ.ಪಂ. ಅಧ್ಯಕ್ಷ ಸೈಯದ್ ಫೈರೋಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ತಾಪಂ ಇಒ ಸಿದ್ದರಾಜು, ತಾ.ಪಂ. ಸದಸ್ಯೆ ಮಂಜುಳ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಡಿ.ಬಿ. ಗಾಯಿತ್ರಿ, ಕಾರ್ಯದರ್ಶಿ ಎನ್.ಎ. ಗಣೇಶ್, ಬಿರಡಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ರಾಜಶೇಖರ್ ಇದ್ದರು.ಗ್ರಾ.ಪಂ. ಸದಸ್ಯ ಯು.ಪಿ. ಬಸವರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಸದಸ್ಯ ಚರಣ್ ವಂದಿಸಿದರು.ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರು ಹಾಗೂ ಕಟ್ಟಡ ಮೇಲ್ವಿ ಚಾರಕ ಯೂಸೂಪ್, ವೃತ್ತಿಯಲ್ಲಿ ಆಟೋ ಚಾಲಕರಾಗಿ ದ್ದುಕೊಂಡು ಕಳೆದ 16 ತಿಂಗಳ ಕಾಲ ಗ್ರಾ.ಪಂ. ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಸೈಯದ್ ಪೈರೋಜ್ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry