ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮ

7

ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮ

Published:
Updated:

ಬೆಂಗಳೂರು: ಬೃಹತ್‌ ಬೆಂಗಳೂರು  ಮಹಾನಗರ ಪಾಲಿಕೆಯ ಚುನಾವಣೆ ಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ವರಿಗೆ ತರಬೇತಿ ನೀಡಲು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್‌) ‘ಬಿ.ಕ್ಲಿಪ್‌–ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದೆ.ನಗರದ ಆಡಳಿತ ವ್ಯವಸ್ಥೆಯಲ್ಲಿ  ಬದಲಾವಣೆಯನ್ನು ತರಲು ಆಸಕ್ತಿ ಹೊಂದಿರುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ನಾಗರಿಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ, ಉತ್ತಮ ನಾಯಕ ರನ್ನಾಗಿ ರೂಪಿಸುವುದೇ ಈ ಕಾರ್ಯ ಕ್ರಮದ ಉದ್ದೇಶ ಎಂದು ಬಿ–ಪ್ಯಾಕ್‌ನ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದ ಮೊದಲನೇ ಹಂತದಲ್ಲಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು. ನಂತರ ಎರಡನೇ ಹಂತದಲ್ಲಿ 3 ತಿಂಗಳ ಕಾಲ ತರಬೇತಿ ಮತ್ತು 6 ತಿಂಗಳ ಕಾಲ ಕ್ಷೇತ್ರ ಕಾರ್ಯದ ಅನುಭವ ನೀಡಲಾಗುತ್ತದೆ ಎಂದರು.3 ತಿಂಗಳ ಕಾಲ ನೀಡುವ ತರಬೇತಿಯಲ್ಲಿ ನಗರದ ಆಡಳಿತ, ಚುನಾವಣಾ ಪ್ರಕ್ರಿಯೆ, ರಾಜಕೀಯ ಸ್ಥಿತಿಗತಿಗಳ ಅರಿವು, ಬೆಂಗಳೂರಿ ಗೊಂದು ಕಾರ್ಯಸೂಚಿ, ಬಿಬಿಎಂಪಿ ಮತ್ತು ಅದರ ಆಂತರಿಕ ಇಲಾಖೆಗಳ ವ್ಯವಹಾರಗಳ ರೀತಿ ನೀತಿ, ನಗರದ ರಾಜಕೀಯ ಮತ್ತು ಚುನಾವಣೆ ಪ್ರಚಾರಗಳ ನಿರ್ವಹಣೆ ಕುರಿತಂತೆ ಪ್ರಾಯೋಗಿಕವಾಗಿಯೂ ತಿಳಿಸಿಕೊಡ ಲಾಗುವುದು ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ತರಬೇತಿ ಪಡೆಯಲು 100 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವರಲ್ಲಿ 50 ಮಂದಿಯಂತೆ 2 ತಂಡಗಳನ್ನು ಮಾಡಿ, ಪ್ರತಿ ಶುಕ್ರವಾರ ಸಂಜೆ  ಹಾಗೂ ಪ್ರತಿ ಶನಿವಾರ ಬೆಳಿಗ್ಗೆ 3 ಗಂಟೆಗಳ ಕಾಲ ನಗರದ ಭಾರತೀಯ ವಿದ್ಯಾಭವನದಲ್ಲಿ ತರಬೇತಿ ನೀಡಲಾಗುವುದು ಎಂದರು.3 ತಿಂಗಳ ತರಬೇತಿ ಮುಗಿದ ನಂತರ 6 ತಿಂಗಳ ಕಾಲ ವಾರ್ಡ್‌ ಮಟ್ಟದಲ್ಲಿ ಕೆಲಸ ಮಾಡುವ ಅನುಭವ ನೀಡಲಾಗುತ್ತದೆ. ಈ ಸಮಯದಲ್ಲಿ ಪ್ರತಿ ತಿಂಗಳು ಅಭ್ಯರ್ಥಿಗಳಿಗೆ ಎಂಟರಿಂದ ಹತ್ತು ಸಾವಿರ ‘ಸ್ಟೈಫಂಡ್‌’ ನೀಡಲಾಗುತ್ತದೆ. ಈ ಹಣವನ್ನು ಅಭ್ಯರ್ಥಿಗಳು ತಮ್ಮ ವಾರ್ಡ್‌ಗಳಲ್ಲಿ ಜನ ಸಂಘಟನೆ, ಜನರ ಸಮಸ್ಯೆಗಳ ಪರಿಹಾರ ಹಾಗೂ ವಾರ್ಡ್‌ಗಳಲ್ಲಿ ಕೆಲಸ ಮಾಡಲು ಬಳಸಿಕೊಳ್ಳಬೇಕು ಎಂದು ಹೇಳಿದರು.ಬಿ–ಪ್ಯಾಕ್‌ ಉಪಾಧ್ಯಕ್ಷ ಟಿ.ವಿ. ಮೋಹನ್‌ದಾಸ್‌ ಪೈ ಮಾತನಾಡಿ, ತರಬೇತಿ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳು ಐದು ಸಾವಿರ ರೂಪಾಯಿಯನ್ನು ಠೇವಣಿ ಇಡಬೇಕು.  ಅಭ್ಯರ್ಥಿಗಳು 9 ತಿಂಗಳ ಕೋರ್ಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಾಗ ಮಾತ್ರ ಈ ಹಣವನ್ನು ಹಿಂತಿರುಗಿಸ ಲಾಗುವುದು ಎಂದರು.ಸದ್ಯದ ಪರಿಸ್ಥಿತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನುಭವುಳ್ಳ ಹಾಗೂ ನಗರದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಆಸಕ್ತಿವಹಿಸುವ ನಾಗರಿಕರ ಅಗತ್ಯ ಇದೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಕಾರ್ಯಕ್ರಮ ಸಹಾಯಕವಾಗಲಿದೆ ಎಂದರು.

ಈಗಾಗಲೇ ತರಬೇತಿಗಾಗಿ ಅರ್ಜಿ ಗಳನ್ನು ಆಹ್ವಾನಿಸಲಾಗಿದ್ದು,   ಅಕ್ಟೋ ಬರ್‌ 20 ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು ಎಂದು ಬಿ–ಪ್ಯಾಕ್‌ನ ಸಂಯೋಜಕ ಎಸ್‌.ಆರ್‌. ಶರತ್‌ ತಿಳಿಸಿದರು.ಬಿ.ಕ್ಲಿಪ್‌ ಸಂಚಾಲಕ ಕೆ.ಜಯರಾಜ್‌ ಹಾಗೂ ಬಿ–ಪ್ಯಾಕ್‌ ಸದಸ್ಯರು ಉಪಸ್ಥಿತರಿದ್ದರು. 

ವೆಬ್‌ ವಿಳಾಸ: bclip@bpac.in,  www.bpac.in/bclip

ದೂ. ಸಂಖ್ಯೆ 9886196640, 9611226186.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry