ನಾಗರಿಕ ಸ್ನೇಹ ವಾತಾವರಣದಿಂದ ಶಾಂತಿ

ಶನಿವಾರ, ಜೂಲೈ 20, 2019
27 °C

ನಾಗರಿಕ ಸ್ನೇಹ ವಾತಾವರಣದಿಂದ ಶಾಂತಿ

Published:
Updated:

ಚಿಟಗುಪ್ಪಾ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ನಾಗರಿಕರ ಸ್ನೆಹ ಪೂರ್ಣವಾದ ಸೌಹಾರ್ದ ಸಂಬಂಧ ಮುಖ್ಯವಾಗಿರುತ್ತದೆ ಎಂದು ಕಾನೂನು ನೆರವು ಕಾರ್ಯಕ್ರಮದ ಜಿಲ್ಲಾ ನೊಡಲ್ ಅಧಿಕಾರಿ ಸಿಪಿಐ ಬಸವೇಶ್ವರರು ಹೇಳಿದರು.ಮಂಗಳವಾರ ನಿರ್ಣಾದಲ್ಲಿ ಜಿಲ್ಲಾ ಪಂಚಾಯಿತಿ, ಬೀದರ್ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಎರ್ಪಡಿಸಿದ್ದ ಕಾನೂನು ನೆರವು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಬಾಲಕಾರ್ಮಿಕ ತಡೆ ಕಾಯಿದೆ 1986ರ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಕೆಲಸ ಮಾಡಲು ಬಳಸಿಕೊಳ್ಳಬಾರದು, ಕರ್ನಾಟಕ ಮಕ್ಕಳ ಕಾಯ್ದೆ 1966ರ ಪ್ರಕಾರ ಆಶ್ರಯ ರಹಿತ ಮಕ್ಕಳಿಗೆ ಆಶ್ರಯ ಕಲ್ಪಿಸಲು ಸರ್ಕಾರ ಶಿಕ್ಷಣ, ಆಶ್ರಯ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಹಲವು ಸೌಲಭ್ಯಗಳು ಕಲ್ಪಿಸಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.ಸರ್ಕ್‌ಲ್ ಇನ್ ಸ್ಪೆಕ್ಟರ್ ವೀರೇಶ ಕರಡಿಗುಡ್ಡ ಮಾತನಾಡಿ, ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಿಸಬಾರದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದಲ್ಲಿ ಮೋಟಾರು ವಾಹನ ಕಾಯ್ದೆ ಕಲಂ 177ರ ಅಡಿಯಲ್ಲಿ ಸೂಚಿಸಿರುವ ದಂಡ ಸರ್ಕಾರಕ್ಕೆ ಭರಿಸಬೇಕಾಗುತ್ತದೆ.  ನಿಗದಿಪಡಿಸಿದ ಗರಿಷ್ಠ ವೇಗದ ಮಿತಿಯನ್ನು ಮೀರಿ ವಾಹನ ಚಲಿಸಬಾರದು, ಸ್ವಯಂ ಸುರಕ್ಷತೆ ಕಾನೂನಿನ ಸುರಕ್ಷತೆ ಆಗಿರುತ್ತದೆ ಎಂದು ಹೇಳಿದರು.ನ್ಯಾಯವಾದಿಗಳಾದ ಶಿವಪುತ್ರ ಮುತ್ತಂಗಿ, ಸುಭಾಷ ಕುಂದನ್, ರವಿ ತೆಲವಡೆ ಮಹಿಳಾ ದೌರ್ಜನ್ಯ ತಡೆ, ಎಸ್.ಸಿ.ಎಸ್.ಟಿ ದೌರ್ಜನ್ಯ, ಪಂಚಾಯತ್ ರಾಜ್ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.

ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಜಗನ್ನಾಥರೆಡ್ಡಿ ಏಖ್ಖೇಳಿ, ಪಿಎಸ್‌ಐ ಗಳಾದ ಶ್ರೀಕಾಂತ ಅಲ್ಲಾಪೂರೆ, ಜಿ.ಎಸ್.ಹೆಬ್ಬಾಳ್ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಜಗದೇವಿ ಝರಣಪ್ಪ ಕಾನೂನು ಅರಿವು ಕೈಪಿಡಿ ಬಿಡುಗಡೆ ಮಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸಂಜೀವರೆಡ್ಡಿ ಹಾಸರೆಡ್ಡಿ, ಬಿಎಸ್‌ಎಸ್‌ಕೆ ನಿರ್ದೇಶಕ ಸುಭಾಷ ಕಾಶೆಂಪೂರ. ಎಪಿಎಂಸಿ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್ ಇದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾಬಾಯಿ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ನಿರೂಪಿಸಿದರು. ಸಂಜುಕುಮಾರ ಉಡಬನಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry